ಹೈದ್ರಾಬಾದ್ :
ನಗರದ ಕಾಚಿಗೂಡ ರೈಲು ನಿಲ್ದಾಣದಲ್ಲಿ ಇಂದು ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಇದರಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಸಿದ್ದಾರೆ ಮತ್ತು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪಾಲಾಕೊಲ್ಲು ಕಡೆಗೆ ತೆರಳುತ್ತಿದ್ದ ಎಂಎಂಟಿಸ್ ರೈಲು ಕರ್ನೂಲ್ ಕಡೆಯಿಂದ ಬರುತ್ತಿದ್ದ ಕರ್ನೂಲು – ಸಿಕೆಂದ್ರಬಾದ್ ಹಂಡ್ರಿ ಎಕ್ಸ್ ಪ್ರೆಸ್ ಗೆ ಡಿಕ್ಕಿ ಹೊಡೆದಿದೆ.ಇನ್ನು ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಬೋಗಿಯಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿದ್ದಾರೆ.