ನವದೆಹಲಿ:
ದೇಶದ ಪ್ರಯಾಣಿಕ ವಾಹನಗಳ ಮಾರಾಟ ಜುಲೈನಲ್ಲಿ ಕಂಡ ಕುಸಿತದಿಂದ ಈವರೆಗೆ ಸತತವಾಗಿ ಒಂಬತ್ತನೇ ಬಾರಿ ಕುಸಿದದು ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ .
ದೇಶದ ವಾಹನ ತಯಾರಿಕಾ ವಲಯದಲ್ಲಿ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯೂ ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ನಷ್ಟಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಜುಲೈ ತಿಂಗಳ ವಾಹನಗಳ ಮಾರಾಟ ಗಮನಿಸಿದರೆ ಶೇಕಡಾ 30.9 ರಷ್ಟು ಕುಸಿತ ಕಂಡಿದೆ ಇದರಿಂದಾಗಿ ಸರಾಸರಿ ಜುಲೈನಲ್ಲಿ ಸುಮಾರು 200,790 ವಾಹನಗಲಷ್ಟೆ ಮಾರಾಟವಾಗಿವೆ ಎಂದು ಸಿಯಾಮ್ ತಿಳಿಸಿದೆ ಮತ್ತು ಇದು ಹೀಗೆ ಮುಂದುವರೆದರೆ ವಾಹನ ತಯಾರಿಕಾ ಉದ್ಯಮ ಖಂಡಿತವಾಗಿ ಮುಳುಗುತ್ತದೆ ಎಂದು ತಿಳಿಸಿದೆ. ಈ ಪತನವು ಹೀಗೆ ಮುಂದುವರಿದಲ್ಲಿ ದೇಶದಲ್ಲಿ ಉದ್ಯೋಗ ಭದ್ರತೆ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ವಾಹನೋಧ್ಯಮವು ಹೇಳ ಹೆಸರಿಲ್ಲದಂತಾಗುತ್ತದೆ ಎಂದು ಸಿಯಾಮ್ ಅಭಿಪ್ರಾಯ ಪಟ್ಟಿದೆ .
ಮೋಟಾರ್ಸೈಕಲ್ ಮತ್ತು ಸ್ಕೂಟರ್ ಮಾರಾಟವು ಶೇಕಡಾ 16.8 ರಷ್ಟು ಕುಸಿದಿದ್ದು ಮಾರಟವು 1.51 ಮಿಲಿಯನ್ ಯುನಿಟ್ಗಳಿಗೆ ತಲುಪಿದ್ದರೆ, ಪ್ರಯಾಣಿಕರ ಕಾರುಗಳ ಮಾರಾಟವು ಶೇಕಡಾ 36 ರಷ್ಟು ಕುಸಿದು 122,956 ಕ್ಕೆ ತಲುಪಿದೆ ಎಂದು ಅಂಕಿ ಅಂಶಗಳಿಂದ ಧೃಡಪಟ್ಟಿದೆ.ದೇಶೀಯ ಪ್ರಯಾಣಿಕರ ವಾಹನ ಉತ್ಪಾದನೆಯು ತಿಂಗಳಲ್ಲಿ ಶೇಕಡಾ 17 ರಷ್ಟು ಕಡಿಮೆಯಾಗಿದೆ.
ಸದ್ಯ ನಮ್ಮ ಮುಂದೆ ಇರುವ ದತ್ತಾಂಶದ ಪ್ರಕಾರ ಸರ್ಕಾರ ಉದ್ಯಮಕ್ಕೆ ಮತ್ತೆ ಜೀವ ಕಳೆ ತುಂಬುವ ಕೆಲಸ ಮಾಡಬೇಕಾಗಿದೆ ಮತ್ತು ಇದಕ್ಕಾಗಿ ವಿಶೇಷ ಪ್ಯಾಕೇಜ್‌ನ ಅಗತ್ಯವಿದೆ , ಕಂಪನಿಗಳು ಮಾರಾಟ ಹೆಚ್ಚಿಸಲು ಸಾಧ್ಯವಿರುವ ಎಲ್ಲಾ ಕಸರತ್ತನ್ನೂ ಮಾಡುತ್ತಿವೆ ಆದರೆ ಬಿಕ್ಕಟ್ಟು ಇನ್ನೂ ಉಲ್ಬಣಗೊಳ್ಳುತ್ತಿದೆಯೇ ಹೊರತು ಕಡಿಮೆ ಮಾತ್ರ ಆಗುತ್ತಿಲ್ಲ ಮತ್ತು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮದ ಉಳಿವಿಗಾಗಿ ಸರ್ಕಾರದ ಉದ್ಯಮವನ್ನು ಬೆಂಬಲಿಸುವುದು ಅಗತ್ಯ” ಎಂದು ಸಿಯಾಮ್‌ನ ಮಹಾನಿರ್ದೇಶಕ ವಿಷ್ಣು ಮಾಥುರ್ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಸ್ & ಪಿ ಬಿಎಸ್ಇ ಆಟೋ ಸೆಕ್ಟರ್ ಸೂಚ್ಯಂಕ ಈ ವರ್ಷ ಶೇಕಡಾ 23 ರಷ್ಟು ಕುಸಿದಿದ್ದು, ದೇಶದ ಉನ್ನತ ವಾಹನ ತಯಾರಕ ಮಾರುತಿ ಸುಜುಕಿಯ ಮಾರುಕಟ್ಟೆ ಮೌಲ್ಯಮಾಪನವು ಈ ವರ್ಷದ ಆರಂಭದಿಂದ ಶೇ 18.3 ರಷ್ಟು ಕುಸಿದಿದೆ.
ಕಾರು ಮತ್ತು ಮೋಟರ್ ಸೈಕಲ್‌ಗಳ ಮಾರಾಟ ಕುಸಿತದಿಂದ ಆಟೋ ವಲಯವು ಈಗಾಗಲೆ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿದೆ, ಅನೇಕ ಕಂಪನಿಗಳು ಇರುವ ಸ್ಟಾಕ್ ಕ್ಲಿಯರ್ ಮಾಡಿ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ ಎಂದು ವರದಿಯಾಗಿವೆ ಇದಕ್ಕೆ ತಾಜಾ ಉದಾಹರಣೆ ಮಹೀಂದ್ರ ತನ್ನ ಕೆಲ ಕಾರು ತಯಾರಿಕಾ ಕಾರ್ಖಾನೆಗಳನ್ನು ಮುಚಿದೆ ಮತ್ತು ಮಾರುತಿ ಇದರ ಬಗ್ಗೆ ಯೋಚನೆ ಮಾಡುತ್ತಿದೆ ಅದೇ ಏನಾದರು ನಡೆದರೆ ದೇಶದ ನಿರುಧ್ಯೋಗದ ಸಮಸ್ಯೆ ಉಲ್ಬಣಗೊಳುವುದರಲ್ಲಿ ಯಾವುದೇಅನುಮಾನವಿಲ್ಲ.
ಇನ್ನು ಈ ಪರಿಸ್ಥಿತಿಗೆ ಇರುವ 5 ಕಾರಣಗಳೆಂದರೆ:
- ಎನ್ ಬಿ ಎಫ್ ಸಿ ಕ್ರೈಸಿಸ್
- ಬೇಡಿಕೆ ಕುಸಿತ
- ಗಣನೀಯವಾಗಿ ಏರಿಕೆಯಾದ ಜಿ ಎಸ್ ಟಿ ದರ
- ಪರಿಷ್ಕೃತ ಅ್ಯಕ್ಸಿಲ್ ನಿಬಂಧನೆಗಳು
- ಇತರೆ ಉತ್ಪಾದನಾ/ಉತ್ಪಾದನೇತರ ಕಾರಣಗಳು