ಉತ್ತರ ಪ್ರದೇಶ
ಕೆಲ ವರ್ಷಗಳ ಹಿಂದೆ ಶೈಕ್ಷಣಿಕ ಸಾಮಗ್ರಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ರೊಟೊಮ್ಯಾಕ್ ಮತ್ತು ಅದರ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಬಗೆಯ ವ್ಯಾಪಾರ ವಹಿವಾಟು ಹೊಂದಿದ್ದ ವಿಕ್ರಮ್ ಕೊಠಾರಿ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ.
ಕಂಪನಿಯ ಮಾಲೀಕರಾದ ವಿಕ್ರಮ್ ಕೊಠಾರಿ, ಪುತ್ರ ರಾಹುಲ್ ಕೊಠಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರು ಲಖನೌ ಅಲಹಾಬಾದ್ ಬ್ಯಾಂಕ್‌ಗೆ 36.84 ಕೋಟಿ ವಂಚಿಸಿರುವುದಾಗಿ ಆರೋಪಿಸಿರುವ ಸಿಬಿಐನ ಉತ್ತರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಎಫ್ ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.
ರೊಟೊಮ್ಯಾಕ್ ಕೇಂದ್ರ ಕಚೇರಿ ಕಾನ್ಪುರದಲ್ಲಿದ್ದು, ಅಲ್ಲಿನ ಅಲಹಾಬಾದ್ ಬ್ಯಾಂಕ್‌ನಿಂದ ಹಣ ಪಡೆದು ವಂಚಿಸಿರುವುದಾಗಿ ದೂರು ನೀಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ