ಪಾಕ್ ಗೆ ಆಘಾತ ನೀಡಿದ ವಿಪ್ರೋ…!

ನವದೆಹಲಿ:
         ಉಗ್ರ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮರ್ಮಾಘಾತ ನೀಡುತ್ತಾ ಬಂದಿದ್ದು ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
        ದೇಶದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದಲ್ಲಿ ಪಾಕ್ ಪ್ರಜೆಗಳು ಇಟ್ಟಿದ್ದ 1,150 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.

 

         ಶತ್ರು ಆಸ್ತಿ ಕಾಯ್ದೆ 1968ರಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಎಲ್ಲಾ ಷೇರುಗಳು ಗೃಹ ಇಲಾಖೆಯ ಶತ್ರು ಆಸ್ತಿ ವಾರಸುದಾರ ವಿಭಾಗದ (ಸಿಇಪಿಐ) ಅಧೀನದಲ್ಲಿತ್ತು. ಭಾರತದಲ್ಲಿದ್ದ ಪಾಕ್ ಪ್ರಜೆಗಳ ಷೇರುಗಳನ್ನು ಮಾರಾಟ ಮಾಡುವ ತೀರ್ಮಾನವನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೈಗೊಂಡಿದೆ. 

 

         1960ರ ದಶಕದಲ್ಲಿ ಭಾರತ-ಪಾಕ್ ಯುದ್ಧ ನಡೆದ ಬಳಿಕ ಸಂಸತ್ತು ಶತ್ರು ಆಸ್ತಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇನ್ನು ಅಜೀಂ ಪ್ರೇಮ್ ಜಿ ಒಡೆತನದ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ 4.3 ಕೋಟಿ ಷೇರುಗಳನ್ನು ರೂ. 258 ಮುಖಬೆಲೆಗೆ ಮಾರಾಟ ಮಾಡಲಾಗಿದೆ. ಇವುಗಳಲ್ಲಿ ಶೇ.80ಕ್ಕೂ ಹೆಚ್ಚು ಷೇರುಗಳನ್ನು ಭಾರತೀಯ ಜೀವವಿಮಾ ನಿಗಮ ಖರೀದಿಸಿದೆ. 

Recent Articles

spot_img

Related Stories

Share via
Copy link
Powered by Social Snap