ನವದೆಹಲಿ:
ತನ್ನ ಎದುರಾಳಿ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಭಾರಿ ಆಫರ್ ಗಳ ನಡುವೆ ಸತತ ನಷ್ಟ ಎದುರಿಸುತ್ತಿರುವ ವೋಡಫೋನ್-ಐಡಿಯಾ ಟೆಲಿಕಾಂ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಎಜಿಆರ್ ಬಾಕಿಯನ್ನು ಪಾವತಿಸಿದೆ.
3,354 ಕೋಟಿ ರೂಪಾಯಿ ಎಜಿಆರ್ ನ್ನು ಮಾ.16 ರಂದು ಪಾವತಿ ಮಾಡಿದ್ದು, ಒಟ್ಟಾರೆ 6,854 ಕೋಟಿ ರೂಪಾಯಿಗಳಷ್ಟು ಎಜಿಆರ್ ನ್ನು ಪಾವತಿ ಮಾಡಿದೆ. ವೋಡಾಫೋನ್-ಐಡಿಯಾದಿಂದ ಒಟ್ಟಾರೆ ಬಡ್ಡಿ ಸಹಿತ 53,000 ಕೋಟಿ ರೂಪಾಯಿ ಎಜಿಅರ್ ಪಾವತಿ ಮಾಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
