ಬೆಂಗಳೂರು
ನಗರದ ಹಲವೆಡೆ ಸೋಮವಾರ ವಿದ್ಯುತ್ ವ್ಯತ್ಯಯವಾಗಲಿದೆ . ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಕರೆಂಟ್ ಇರಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವ ಯಾವ ಏರಿಯಾಗಳಲ್ಲಿ ಮತ್ತು ಯಾವ ಸಮಯದಲ್ಲಿ ವಿದ್ಯುತ್ ಇರಲ್ಲ ಎಂಬ ಮಾಹಿತಿ ಈ ಕೆಳಗಿನಂತಿದೆ.
HSR ಲೇಔಟ್ ಮತ್ತು ಕೋರಮಂಗಲದ Bwssb Stp, ಜಕ್ಕಸಂದ್ರ, ಹೆಚ್ಎಸ್ಆರ್ 5ನೇ ವಲಯದ ಟೀಚರ್ಸ್ ಕಾಲೋನಿ, ವೆಂಕಟಾಪುರದ ಭಾಗ, ಗ್ರೀನೇಜ್ ಅಪಾರ್ಟ್‌ಮೆಂಟ್, ಕೋರಮಂಗಲ ಎಕ್ಸಟೆನ್ಷನ್ನಲ್ಲಿ ಇಂದು ಬೆಳಗ್ಗೆ 10:00 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.
ಹೆಬ್ಬಾಳ ಮತ್ತು ಜಾಲಹಳ್ಳಿಯ ವಿದ್ಯಾರಣ್ಯಪುರ, ಯಲಹಂಕ ನ್ಯೂ ಓಲ್ಡ್ ಟೌನ್, ಕೆಎಮ್ಎಫ್, ಮಾರುತಿ ನಗರ, ಎಂ.ಎಸ್.ಪಾಳ್ಯ, ಎಲ್&ಟಿ, ಎನ್ಸಿಬಿಎಸ್, ಬ್ಯಾಟರಾಯನಪುರ, ಪುರವಂಕರ ಬ್ಲಾಕ್-1,2,3 ಮತ್ತು 4, ಆರ್ಎಮ್ಝೆಡ್, ಜಿಕೆವಿಕೆ, ಜುಡಿಕಲ್ ಲೇಔಟ್ನಲ್ಲಿ ಬೆಳಗ್ಗೆ 10:30 ರಿಂದ ಸಂಜೆ 6:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೋರಮಂಗಲದ ರಾಜಶ್ರೀ ಲೇಔಟ್, ಗಾಂಧಿನಗರ, ಲಕ್ಷ್ಮಿ ಲೇಔಟ್, ಸಿಲ್ವರ್ ಸ್ಪ್ರಿಂಗ್ ಲೇಔಟ್, ಭುವನೇಶ್ವರಿ ಲೇಔಟ್, ಮುನ್ನೇಕೊಳಲ್ದಲ್ಲಿ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಇನ್ನು ಜಿಎಂ ಪಾಳ್ಯ ಪೂರ್ಣ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕರೆಂಟ್ ಕಟ್ ಆಗಲಿದೆ.