ನವದೆಹಲಿ:
ಎರಡನೆ ಹಂತದ ಚುನಾವಣೆಯ ಮತದಾನ ಪ್ರಗತಿಯಲ್ಲಿರುವ 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯುತ್ತಿದೆ.ಸುಮಾರು 11ಗಂಟೆವೇಳೆಗೆ ಶೇ.12.69 ರಷ್ಟು ಮತದಾನವಾಗಿದೆ.
ಪ.ಬಂಗಾಳದ ರಾಯ್ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು,ಮತಗಟ್ಟೆ ಹಾಗೂ ಇವಿಎಂ ಅನ್ನು ಧ್ವಂಸ ಮಾಡಿರುವ ಘಟನೆ ವರದಿಯಾಗಿದೆ.
ಇವಿಎಂ ಧ್ವಂಸಗೊಳಿಸಿದ್ದರಿಂದ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಅರೆಸೇನಾ ಪಡೆ, ಪೊಲೀಸರು ಆಗಮಿಸಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ.