ಮಹಾರಾಷ್ಟ್ರ : ಎನ್ ಸಿ ಪಿ -“ಕೈ” ಹಿಡಿಯಲು ನಾವು ಸಿದ್ದ : ಸಂಜಯ್ ರಾವತ್

ಮುಂಬೈ:

     ಸರ್ಕಾರ ರಚನೆಯಲ್ಲಿ ಉಂಟಾದ ಬಿಕ್ಕಟ್ಟಿಗೆ ಅಂತೂ ಇಂತೂ ತೆರೆ ಬೀಳುವ ಸಮಯ ಬಂದಿದೆ ಮಹತ್ವದ ಬೆಳವಣಿಗೆಯಲ್ಲಿ  ಶಿವಸೇನೆ ಇದೀಗ ಎನ್’ಡಿಎಗೆ ಕೈಕೊಟ್ಟು, ಕಾಂಗ್ರೆಸ್-ಎನ್’ಸಿಪಿ ಪಕ್ಷಗಳ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ನಾವು ಸಿದ್ಧ ಎಂದು ಹೇಳಿದೆ. 

    ಬಿಜೆಪಿ ನೇತೃತ್ವದ ಎನ್’ಡಿಎ ಜೊತೆಗಿನ ಮೈತ್ರಿ ಮುರಿಯಲು ಶಿವಸೇನೆ ನಿರ್ಧರಿಸಿದ್ದು, ಕಾಂಗ್ರೆಸ್ ಹಾಗೂ ಎನ್’ಸಿಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ತೀರ್ಮಾನಿಸಿದ್ದೇವೆಂದು ಸಂಜಯ್ ರಾವತ್  ಹೇಳಿದ್ದಾರೆ. 

    ಕೇಂದ್ರ ಸಂಪುಟದಲ್ಲಿ ಶಿವಸೇನೆಯ ಏಕೈಕ ಕೇಂದ್ರ ಸಚಿವರಾಗಿದ್ದ ಅರವಿಂದ ಸಾವಂತ್ ಅವರನ್ನು ಹುದ್ದೆಯಿಂದ ದೂರ ಇರುವಂತೆ ಪಕ್ಷದ ಅಧ್ಯಕ್ಷರು ನಿರ್ದೇಶಿಸಿದ್ದರು. ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿ ನಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದು, ನಮ್ಮನ್ನು ಅಧಿಕಾರದಿಂದ ಸಂಪೂರ್ಣವಾಗಿ ದೂರ ಇಡಲು ನಿರ್ಧರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಎನ್’ಡಿಎ ಜೊತೆಗೆ ಮುಂದುವರೆಯುವುದಾದರೂ ಹೇಗೆ?  ಎಂದು ಪ್ರಶ್ನಿಸಿದ್ದಾರೆ,ಬದಲಾವಣೆಗೆ ನಾವು ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ. ಎಲ್ಲಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿರುವುದು ಇನ್ನು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link