ನವದೆಹಲಿ:
ದೇಶದ ಜನರ ತಲೆ ಕೆಡಿಸಿದ್ದ ರಾಫೆಲ್ ಯುದ್ದ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ನೀಡಿರುವ ಸವಾಲಿಗೆ ಉತ್ತರಿಸಲು ನಾವು ಸಿದ್ಧರಿದ್ದು, ಚರ್ಚೆಗೆ ನೀವೆ ಸಮಯ ನಿಗದಿ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ .
ರಾಫೆಲ್ ಒಪ್ಪಂದದ ಕುರಿತು ಸೋಮವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ಅವಧಿಯಲ್ಲಿ. ರಫೇಲ್ ಕುರಿತ ಚರ್ಚೆಗೆ ಬನ್ನಿ, ಓಡಿಹೋಗಬೇಡಿ ಎಂಬ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಸವಾಲು ಸ್ವೀಕರಿಸಿದ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಚರ್ಚೆಗೆ ನಾವು ಸಿದ್ಧ. ಜನವರಿ 2ರಂದು ಸಮಯ ನಿಗದಿ ಮಾಡಿ,’ ಎಂದು ಗುಡುಗಿದ್ದಾರೆ ಮತ್ತು ನಿಮ್ಮ ಸವಾಲಿಗೆ ಸೈ ಎನ್ನುವಂತೆ ಉತ್ತರಿಸುವ ಸಾಮರ್ಥಯ ನಮಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.