ಬಿಲಾಸ್ಪುರ:

ಚುನಾವಣೆಗಳಲ್ಲಿ ಬಿಜೆಪಿಯನ್ನು ಎದುರಿಸುವುದು ಹೇಗೆ ವಿರೋಧ ಪಕ್ಷಗಳಿಗೆ ಈಗಲೂ ತಿಳಿದಿಲ್ಲ ಮತ್ತು ತಿಳಿಯುವುದೂ ಇಲ್ಲಾ . ನಾವು ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ. ಜಾತಿ ಭೇದಗಳಿಗೆ ಮೀರಿ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇವೆಂದು ನರೇಂದ್ರ ಮೋದಿ ಇಂದು ನಡೆದ ಚುನಾವಣಾ ಪ್ರಚಾರದ ವೇಳೆ ತಿಳಿಸಿದ್ದಾರೆ.
ಛತ್ತೀಸ್ಗಢ ರಾಜ್ಯದ ಬಿಲಾಸ್ಪುರದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ವಿರೋಧ ಪಕ್ಷಗಳಿಗೆ ಈಗಲೂ ಬಿಜೆಪಿಯನ್ನು ಚುನಾವಣೆಗಳಲ್ಲಿ ಸೋಲಿಸುವುದು ಹೇಗೆ ಎಂಬುದು ಅರ್ಥವಾಗಿಲ್ಲ. ಛತ್ತೀಸ್ಗಢದಲ್ಲಿ ಎಲ್ಲಿಯೇ ಹೋದರೂ ನೀವು ಅಭಿವೃದ್ಧಿಯನ್ನು ಕಾಣಬಹುದು ಎಂದು ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
