ಪಾಟ್ನಾ
ಮೂಲಭೂತ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಪ್ರಸಕ್ತ ಆಡಳಿತಾವಧಿಯಲ್ಲಿ ಧಕ್ಕೆಯಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಗೆ ಜನರು ಪರ್ಯಾಯ ಮಾರ್ಗ ಬಯಸಿ ಮತಚಲಾಯಿಸಲಿದ್ದಾರೆ ಎಂದು ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಭಾರತದ ಪ್ರಜಾಪ್ರಭುತ್ವಕ್ಕೆ ಅತಿ ಮುಖ್ಯವಾಗಿದೆ ಎಂದ ಅವರು, ಪ್ರಸ್ತುತ ಕೇಂದ್ರ ಸರ್ಕಾರದ ಆಡಳಿತದಲ್ಲಿ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಕಿಡಿಕಾರಿದರು.
ಅಧಿಕಾರದ ಉತ್ತುಗಂದಲ್ಲಿರುವವರು ತಮ್ಮ ನಿಲುವುಗಳಲ್ಲಿ ವಿಶಾಲ ಹೃದಯಿಗಳಾಗದೇ ಇರುವುದರಿಂದ ಜನರು ಉತ್ತಮ ಆಯ್ಕೆಯತ್ತ ಮನಸ್ಸು ಮಾಡಲಿದ್ದಾರೆ. ಜವಾಬ್ದಾರಿಯುತ ಸರ್ಕಾರ ಚುನಾಯಿಸಿ ದೇಶದ ಪ್ರಜಾಪ್ರಭುತ್ವ ಉಳಿಸುವ ಸಮಯ ಬಂದಿದೆ ಎಂದು ಯಾದವ್ ಹೇಳಿದರು.ಪ್ರಜಾಪ್ರಭುತ್ವದ ಮೂಲಕ ಹಕ್ಕುಗಳನ್ನು ರಕ್ಷಿಸಲು ಮತ ಚಲಾಯಿಸುವಂತೆ ತೇಜಸ್ವಿ ಯಾದವ್ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ