ನವದೆಹಲಿ:
ದೇಶದ ರಾಜಕೀಯದಲ್ಲಿ ಈಗ ತಂದೆ ತಾಯಿಯ ವಿಷಯ ಉಪಯೋಗಿಸಿ ರಾಜಕೀಯ ಮಾಡುವ ಹೊಸ ಪರ್ವಕ್ಕೆ ನಾಂದಿ ಹಾಡಿರುವ ಕಾಂಗ್ರೇಸ್ ನಾಯಕರು ಮೊದಲು ಮೋದಿ ತಾಯಿಯನ್ನು ರಾಜಕೀಯಕ್ಕಾಗಿ ಉಪಯೋಗಿಸಿದ ನಾಯಕರು ಈಗ ಮೋದಿ ತಂದೆ ಯಾರು ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗು ಕೇಂದ್ರದ ಮಾಜಿ ಸಚಿವ ವಿಲಾಸ್ ಮುತ್ತೆಮ್ ವಾರ್ ಈ ರೀತಿಯ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ರಾಜಕೀಯಕ್ಕೆ ಬರುವುದಕ್ಕೂ ಮೊದಲೇ ಅವರ ತಲೆಮಾರುಗಳ ಪರಿಚಯ ಜನರಿಗಿದೆ. ರಾಹುಲ್ ತಂದೆ ತಂದೆ ರಾಜೀವ್ ಎನ್ನುವುದು ಗೊತ್ತಿದೆ. ರಾಜೀವ್ ತಾಯಿ ಇಂದಿರಾ, ಇಂದಿರಾ ತಂದೆ ನೆಹರು ಎಂದು, ನೆಹರು ತಂದೆ ಮೋತಿ ಲಾಲ್ ನೆಹರು ಎನ್ನುವುದು ಗೊತ್ತು. ಆದರೆ ಮೋದಿಯ ತಂದೆ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದು ಹೇಳುವ ನೋಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಪಕ್ಷಕ್ಕೆ ಮುಜುಗರ ಮೂಡಿಸಿರುವುದಂತು ನಿಜ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ