ಸಕ್ರಿಯ ರಾಜಕಾರಣಕ್ಕೆ ರಾಬರ್ಟ್ ವಾದ್ರಾ ಬರುವರೇ ..!???

ನವದೆಹಲಿ:
       ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಅವರು ರಾಜಕೀಯ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕೀಯ ಪ್ರವೇಶಿಸಿದ ಒಂದು ತಿಂಗಳ ನಂತರ ರಾಬರ್ಟ್ ವಾದ್ರಾ ಈ ಸೂಚನೆ ನಿಡಿದ್ದಾರೆ.
       “ಇಷ್ಟು ವರ್ಷದ ಅನುಭವ ಹಾಗೂ ಕಲಿಕೆಯನ್ನು ವ್ಯರ್ಥವಾಗಿಸುವುದಿಲ್ಲ, ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ” ರಾಬರ್ಟ್ ವಾದ್ರಾ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
       “ದೇಶದ ಹಲವು ಭಾಗಗಳಲ್ಲಿ ನಾನು ಹಲವು ವರ್ಷಗಳ ಕಾಲ, ತಿಂಗಳುಗಳ ಕಾಲ ದಣಿವರಿಯದೆ ಕೆಲಸ ಮಾಡಿದ್ದೇನೆ. ಆದರೆ ಉತ್ತರ ಪ್ರದೇಶ ಜನತೆಗೆ ಹೆಚ್ಚು ಸೇವೆ ಮಾಡಬೇಕೆಂಬ ಭಾವನೆ ನನ್ನಲ್ಲಿ ಮೂಡಿದೆ.ಅಲ್ಲದೆ ಅವರು ಸಾಧ್ಯವಾದಷ್ಟು ಸಣ್ಣ ಸಣ್ಣ ಬದಲಾವಣೆಗಳನ್ನು ನನ್ನಿಂದ ಮಾಡಿಸಿದ್ದಾರೆ. ಅವರು ನನ್ನನ್ನು ಅವರ ಊರುಗಳಲ್ಲಿ ಕಂಡಾಗ  ನನಗೆ, ನಿಜವಾದ ಪ್ರೀತಿ ಹಾಗೂ ಗೌರವ ಸೂಚಿಸಿದ್ದಾರೆ.
       ನನ್ನ ಮೇಲಿನ ಈ ಎಲ್ಲಾ ಆರೋಪ, ಪ್ರತ್ಯಾರೋಪಗಳೂ ಮುಗಿದ ನಂತರ ನಾನು ಜನರಿಗೆ ಸೇವೆ ಸಲ್ಲಿಸಬೇಕು, ಇದಕ್ಕಾಗಿ ದೊಡ್ಡ ಮಟ್ತದಲ್ಲಿ ಸಾರ್ವಜನಿಕ ಸೇವಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಬೇಕೆಂದಿದ್ದೇನೆ “ಎಂದು  ವಾದ್ರಾ ತಮ್ಮ ರಾಜಕೀಯ ಇಂಗಿತ ವ್ಯಕ್ತ ಪಡಿಸಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap