ರಾಜ್ಯಸಭೆಯಲ್ಲಿ ಗೆಲ್ಲುವುದೇ ಪೌರತ್ವ ತಿದ್ದುಪಡಿ ಮಸೂದೆ..!

ನವದೆಹಲಿ:

    ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ ಗೃಹ ಸಚಿವ ಅಮಿತ್ ಶಾ, ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ, “ಅವರು ದೇಶದ ಪ್ರಜೆಗಳಾಗಿ ಉಳಿಯುತ್ತಾರೆ” ಎಂದು ತಿಳಿಸಿದ್ದಾರೆ.

   “ಈ ಮಸೂದೆ ಮುಸ್ಲಿಮರ ವಿರುದ್ಧವಾಗಿದೆ ಎಂದು ತಪ್ಪು ಮಾಹಿತಿ ಹರಡುವ ಪ್ರಯತ್ನಗಳು ನಡೆಯುತ್ತಿವೆ. ಈ ಮಸೂದೆ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ. ಇದಕ್ಕೂ ಭಾರತದ ಮುಸ್ಲಿಮರೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.

   “ಭಾರತೀಯ ಮುಸ್ಲಿಮರು ಸುರಕ್ಷಿತರಾಗಿದ್ದಾರೆ ಮತ್ತು ಯಾವಾಗಲೂ ಸುರಕ್ಷಿತವಾಗಿರುತ್ತಾರೆ. ದಯವಿಟ್ಟು ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಿ ಎಂದು ಭಾರತೀಯ ಮುಸ್ಲಿಮರಿಗೆ ಮನವಿ ಮಾಡುತ್ತೇನೆ ಎಂದರು. ದಯವಿಟ್ಟು ನಾಗರೀಕರನ್ನು ಎಂದಿಗೂ ದಾರಿ ತಪ್ಪಿಸಬೇಡಿ. ಧೈರ್ಯದಿಂದ ಬದುಕಿ .”

    ಪೌರತ್ವ (ತಿದ್ದುಪಡಿ) ಮಸೂದೆ 2015 ರ ಮೊದಲು ದೇಶ ಪ್ರವೇಶಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಮುಸ್ಲಿಮೇತರ ವಲಸಿಗರನ್ನು ಭಾರತೀಯ ನಾಗರಿಕರನ್ನಾಗಿಸಲು ಸುಲಭವಾಗಿಸಲು ಪ್ರಯತ್ನ ಇದಾಗಿದೆ. ಸೋಮವಾರ ಸತತ ಏಳು ಗಂಟೆಗಳ ಚರ್ಚೆಯ ನಂತರ ಮಸೂದೆಗೆ ಲೋಕಸಭೆಯಲ್ಲಿ  334 ಮತಗಳು ಪರವಾಗಿ ಮತ್ತು 106 ಮತಗಳನ್ನು ವಿರುದ್ಧವಾಗಿ ಬಂದು ಪಾಸ್ ಆಗಿತ್ತು ಇಂದು ಬೆಳಿಗ್ಗೆ ರಾಜ್ಯಸಭಾ ಕಲಾಪ ಪ್ರಾರಂಭವಾಗುತ್ತಿದಂತೆ ಮಸೂದೆಯನ್ನು ಟೇಬಲ್ ಮಾಡಲಾಗಿತ್ತು.ಇನ್ನೂ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ನೋಡಿದರೆ ಎನ್ ಡಿ ಎ 117 ಮತ್ತು ವಿರೋಧ ಪಕ್ಷವಾದ ಯುಪಿಎ 63 ಸದಸ್ಯರನ್ನು ಹೊಂದಿದೆ. 

     ರಾಷ್ಟ್ರಗಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಮತ್ತು ಇಸ್ಲಾಂ ಧರ್ಮವನ್ನು ಅವರ ಸಂವಿಧಾನಗಳಲ್ಲಿ ಪ್ರತಿಪಾದಿಸಲಾಗಿದೆ . ಆದ್ದರಿಂದ ಅವರು ಇತರ ಸಮುದಾಯಗಳಂತೆ ಧಾರ್ಮಿಕ ಕಿರುಕುಳವನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಏನು ಹೇಳುತ್ತಿದ್ದಾರೆ ? ನಾವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರಿಗೆ ಪೌರತ್ವವನ್ನು ನೀಡಬೇಕೇ? ನಾವು ವಿಶ್ವದಾದ್ಯಂತ ಇರುವ  ಮುಸ್ಲಿಮರನ್ನು ನಮ್ಮ ನಾಗರಿಕರನ್ನಾಗಿ ಮಾಡಬೇಕೇ? ಇದು ಹೇಗೆ ಸಾಧ್ಯ? ಒಂದು ದೇಶವು ಈ ರೀತಿ ಹೇಗೆ ಕಾರ್ಯನಿರ್ವಹಿಸಬಹುದು “ಎಂದು ಅಮಿತ್ ಶಾ ಪ್ರಶ್ನಿಸಿದರು.

    ಮಸೂದೆ ಮುಸ್ಲಿಮರ ವಿರುದ್ಧ ತಾರತಮ್ಯವನ್ನುಂಟುಮಾಡುತ್ತದೆ ಮತ್ತು ಆದ್ದರಿಂದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ ಮತ್ತು ಜಾತ್ಯತೀತತೆಯ ಸಿದ್ಧಾಂತಗಳ ಉಲ್ಲಂಘನೆಯಾಗಿದೆ ಎಂದು ವಿರೋಧ ಪಕ್ಷಗಳು ವಿರೋಧ ವ್ಯಕ್ತ ಪಡಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap