ರಫೇಲ್ ಡೀಲ್ : ಜೇಟ್ಲಿ ಸ್ಪಷ್ಟ ಉತ್ತರ

ದೆಹಲಿ:  

    ರಫೇಲ್‌ ಯುದ್ಧ ವಿಮಾನಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರ ಹಾಗು ವಿಪಕ್ಷದ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ ತಣ್ಣಗಾದಂತೆ ಕಾಣುತ್ತಿಲ್ಲ.

    ಪ್ರತಿಪಕ್ಷದ ಆರೋಪಗಳ  ಕುರತು ಪ್ರತಿಕ್ರಿಯೆ ನೀಡಿದ  ಅರುಣ್‌ ಜೇಟ್ಲಿ, “ಮಾನವ ಬೇಕಿದ್ದರೆ ಸುಳ್ಳುಗಳನ್ನು ಹೇಳಬಹುದು. ಆದರೆ ವಾಸ್ತವ ಎಂದಿಗೂ ಸುಳ್ಳು ಹೇಳಲು ಸಾಧ್ಯವಿಲ್ಲ . ಕಾಂಗ್ರೆಸ್‌ ಏನು ಬೇಕಾದರೂ ಹೇಳಬಹುದು, ಆದರೆ ಮೂಲ ಸತ್ಯಗಳು ಎಂದಿಗೂ ಸುಳ್ಳಾಗಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ .

    ಫ್ರೆಂಚ್‌ ಮಾಜಿ ಅಧ್ಯಕ್ಷ ಫ್ರಾಂಕ್ವಾ ಹೊಲಾಂಡೆ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೇಂದ್ರದ ಮೇಲೆ ಮಾತಿನ ದಾಳಿ ನಡೆಸುತ್ತಿರುವ ಕಾಂಗ್ರೆಸ್‌ಗೆ ಪ್ರತಿಕ್ರಿಯಿಸಿದ ಜೇಟ್ಲಿ, “ರಾಹುಲ್‌ ಗಾಂಧಿಯ ವಿಷಯ ಜ್ಞಾನ ನೋಡಿದರೆ ಅಯ್ಯೋ ಎನಿಸುತ್ತದೆ. 56,000 ಕೋಟಿರು ಖರೀದಿಯ ಆಫ್‌ಸೆಟ್‌ ಮೌಲ್ಯ 28,000 ಕೋಟಿ ರುಗಳು ಎಂದುಕೊಳ್ಳಿ. ಆಫ್‌ಸೆಟ್‌ ಪೂರೈಕೆಯ ಭಾಗವಾಗಿ 2 ಸಂಸ್ಥೆಗಳಲ್ಲಿ ನಾನೂ ಒಬ್ಬ ಎಂದುಕೊಳ್ಳಿ. ಆಗ ಪ್ರತಿಯೊಬ್ಬರಿಗೂ 2000-4000 ಕೋಟಿಯಷ್ಟು ಹಂಚಿಕೆಯಾಗುತ್ತದೆ. ಹೀಗಾದಲ್ಲಿ ಅದು ಹೇಗೆ ತಪ್ಪಾಗುತ್ತದೆ?” ಎಂದು ಹೇಳಿದ್ದಾರೆ.

     ವಿಮಾನಗಳನ್ನು ಹೆಚ್ಚಿನ ಮೊತ್ತ ತೆತ್ತು ಖರೀದಿ ಮಾಡಲಾಗುತ್ತಿದೆಯೇ ಎಂಬುದನ್ನು ಮಹಾಲೇಖಪಾಲರೇ ತಿಳಿಸಲಿದ್ದಾರೆ. ಕಾಂಗ್ರೆಸ್‌ ಎಷ್ಟೇ ಬೊಬ್ಬಿರಿದರೂ ರಫೇಲ್‌ ಡೀಲ್‌ಅನ್ನು ರದ್ದು ಮಾಡುವುದಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

     2012ರಲ್ಲಿ ಇದೇ ರಫೇಲ್‌ ಖರೀದಿ ವೇಳೆ ಮುಖೇಶ್‌ ಅಂಬಾನಿ ನೇತೃತ್ವದ ರಿಲಾಯನ್ಸ್‌ ಹಾಗು ಡಸೌ ಏವಿಯೇಷನ್ ನಡುವೆ ಒಪ್ಪಂದವೇರ್ಪಟ್ಟಿತ್ತು ಎಂದು ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ ಯುಪಿಎ ಸರಕಾರದ ನೇತೃತ್ವದಲ್ಲಿ ಮಾಡಿಕೊಳ್ಳಲಾದ ಈ ಕಾಂಟ್ರಾಕ್ಟ್‌ ಹಿನ್ನೆಲೆಯಲ್ಲೇ, 18 ರಫೇಲ್‌ ಯುದ್ಧ ವಿಮಾನಗಳನ್ನು ಸಿದ್ಧ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಕೆ ಮಾಡಲು ಫ್ರಾನ್ಸ್‌ನ ಡಸೌ ಜತೆ ಒಪ್ಪಂದಕ್ಕೆ ಅಂದಿನ ಸರಕಾರ ಮುಂದಾಗಿತ್ತು.

     ಹಿಂದಿನ ಒಪ್ಪಂದದ ವೇಳೆ, ಯುದ್ಧ ವಿಮಾನಗಳಿಗೆ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನಾಗಲೀ, ವಿಶೇಷ ಏವಿಯಾನಿಕ್ಸ್‌ ತಂತ್ರಜ್ಞಾನದ ಜೋಡಣೆಯನ್ನಾಗಲೀ ಮಾಡುವ ಸಂಬಂಧ ಯಾವುದೇ ಶರತ್ತುಗಳನ್ನು ಒಪ್ಪಂದದಲ್ಲಿ ಉಲ್ಲೇಖ ಮಾಡಿರಲಿಲ್ಲ ಎಂದು ಜೇಟ್ಲಿ ಕಾಂಗ್ರೇಸ್ ಗೆ ಟಾಂಗ್ ನೀಡಿದ್ದಾರೆ. 

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap