ಬೆಂಗಳೂರು
ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ಸುಗ್ರೀವಾಜ್ಞೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಇದು ಮುಸ್ಲಿಂ ಮಹಿಳೆಯರಿಗೆ ಅಗತ್ಯವಿಲ್ಲ ಎಂದು ಅಖಲ ಭಾರತ ಇಸ್ಲಾಂ ಮಹಿಳಾ ಫರ್ಸೋನಲ್ ಲಾ ಸಮಿತಿಯ ಮಹಿಳಾ ಘಟಕ ಸದಸ್ಯರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಕ್ ಸುಗ್ರೀವಾಜ್ಞೆ ವಿರುದ್ದ ಕೋಟಿ ಸಹಿ ಸಂಗ್ರಹ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಈ ವಿಚಾರದಲ್ಲಿ ಸರ್ಕಾರ ಪ್ರವೇಶ ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರದ ತ್ರಿವಳಿ ತಲಾಕ್ ಸುಗ್ರೀವಾಜ್ಞೆ ತರುವ ಮೂಲಕ ಪ್ರಜಾತಂತ್ರದ ಹತ್ಯೆ ಮಾಡಿದೆ. ಅತಿ ವೇಗದಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ರಾಜಕೀಯ ದುರುದ್ದೇಶ ಇದರಲ್ಲಿ ಅಡಗಿರುವುದು ಸ್ಪಷ್ಟವಾಗಿದೆ. ಮುಸ್ಲಿಂ ಮಹಿಳೆಯರಿಗೆ ಇದರ ಅಗತ್ಯ ಇರಲಿಲ್ಲ ಎಂದಿದ್ದಾರೆ.
ತ್ರಿವಳಿ ತಲಾಕ್ ವಿರುದ್ದ 2 ಕೋಟಿ ಸಹಿ ಸಂಗ್ರಹ ಮಾಡಲಾಗುವುದು. 200ಕ್ಕೂ ಹೆಚ್ಚು ರ್ಯಾಲಿಗಳನ್ನು ಆಯೋಜಿಸಿ ಮಾಡಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಇಸ್ಲಾಂಗೆ ನಮ್ಮದೇ ಆದಂತಹ ಕಾನೂನು ಇದೆ. ಸರ್ಕಾರ ಮಧ್ಯ ಪ್ರವೇಶ ಮಾಡುವುದು ಸರಿಯಲ್ಲ ಎಂದರು.
ಸರ್ಕಾರಕ್ಕೆ ಮುಸ್ಲಿಂ ಮಹಿಳೆಯರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಉದ್ಯೋಗಾವಕಾಶ ನೀಡಲಿ. ಅದನ್ನ ಬಿಟ್ಟು ನಮ್ಮ ಶರಿಯತ್ ವಿಚಾರದಲ್ಲಿ ಮದ್ಯ ಪ್ರವೇಶ ಮಾಡುವುದು ಸರಿಯಲ್ಲ. ಸುಗ್ರೀವಾಜ್ಞೆಯ ಪ್ರಕಾರ ಗಂಡ ಜೈಲಿಗೆ ಹೋದರೆ ಹೆಂಡತಿ ಮಕ್ಕಳು ಬೀದಿ ಪಾಲಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅದೇ ತ್ರಿವಳಿ ತಲಾಕ್‍ನಿಂದ ಹೆಂಡಿತಿ ಮಕ್ಕಳಿಗೆ ಜೀವಾನಾಂಶ ಪಡೆಯುವ ಅವಕಾಶ ಇದೆ. ಇದು ಕೇವಲ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಸುಗ್ರೀವಾಜ್ಞೆಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆಯನ್ನ ದೃಷ್ಠಿಯಲ್ಲಿ ಇಟ್ಟುಕೊಂಡು ಸುಗ್ರಿವಾಜ್ಞೆ ಜಾರಿಯಾಗಿದೆ. ತ್ರಿವಳಿ ತಲಾಕ್‍ನಿಂದ ಇಸ್ಲಾಂನಲ್ಲಿ ಯಾವುದೇ ಮಹಿಳೆಯ ಶೋಷಣೆ ನಡೆದಿಲ್ಲ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
