ನವದೆಹಲಿ:
ದೇಶದ ತುಂಬೆಲ್ಲಾ ಈಗ ಸಧ್ಯ ಚರ್ಚೆಯಲ್ಲಿರುವ ವಿಷಯ ಲೋಕಾ ಚುನಾವಣೆ ಇದನ್ನು ಇಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆ ಬಳಿಕ ಯಾರು ಮುಂದಿನ ಪ್ರಧಾನಿಯಾಗಬಹುದು ಎಂದು ಕೇಳುವವರ ಸಂಖ್ಯೆ ಕೂಡ ಹೆಚ್ಚಿದೆ ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಯೋಗ ಗುರು ಶ್ರೀ ಬಾಬಾ ರಾಮ್ ದೇವ್ ಅವರು ಹೇಳುವ ಪ್ರಕಾರ ಮುಂದಿನ ಬಾರಿ ಮೋದಿ ಸರ್ಕಾರ ಬರುವುದು ಸ್ವಲ್ಪ ಡೌಟು ಎಂದಿದ್ದಾರೆ ಮತ್ತು ನಾನು ಯಾವ ಪಕ್ಷದ ಪರವೂ ಪ್ರಚಾರಕ್ಕೆ ಹೋಗುವುದು ಇಲ್ಲಾ ಎಂದು ಹೇಳು ಮೂಲಕ ಹಿಡಿದಿದ್ದ ಮೋದಿ ಕೈಯನ್ನು ಬಿಡಲು ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ .
ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿ ಬೆನ್ನಿಗೆ ನಿಲ್ಲುತ್ತಿದ್ದ ಬಾಬಾ ರಾಮ್ ದೇವ್ ಇದೀಗ ಮುಂದಿನ ಪ್ರಧಾನಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್, ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕಠಿಣವಾಗಿದೆ. ಈಗಲೇ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ತುಂಬಾ ಆಸಕ್ತಿಕರವಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








