ಹೈದರಾಬಾದ್:
ಶ್ವಾನ ಎಂದರೆ ನಿಯತ್ತಿನ ಪ್ರಾಣಿ ಜೊತೆಗೆ ಆಪ್ತ ಗೆಳೆಯ ಎಂದು ತಿಳಿಯುವವರಿದ್ದಾರೆ ಅಂತಹವರಿಗಾಗಿಯೇ ದೇಶದಲ್ಲಿಯೇ ಪ್ರಪ್ರಥಮ ಶ್ವಾನ ಪಾರ್ಕ್ ಲೋಕಾರ್ಪಣೆಗಂಡಿದೆ ಇದು ಹೈದರಾಬಾದ್ ನಲ್ಲಿ ಉದ್ಘಾಟನೆಯಾಗಿದೆ.
ಶ್ವಾನಗಳಿಗೆ ಅನುಕೂಲವಾಗುವಂತೆ ವಾಕಿಂಗ್ ಟ್ರ್ಯಾಕ್, ಕ್ಲಿನಿಕ್‍ನ್ನು ಸಹ ಈ ಉದ್ಯಾನವನ ಒಳಗೊಂಡಿದೆ. 1.2 ಎಕರೆ ವಿಸ್ತೀರ್ಣ ಹೊಂದಿರುವ ಈ ಶ್ವಾನಗಳ ಉದ್ಯಾನವನ್ನು ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ಕೆ.ಜೋಶಿ ಉದ್ಘಾಟಿಸಿದರು. ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉದ್ಯಾನವನದಲ್ಲಿ ಸಾಕುಪ್ರಾಣಿಗಳಿಗೆ ಆರೋಗ್ಯ ತಪಾಸಣೆ ಮತ್ತು ಸುರಕ್ಷಿತ ಪರಿಸರವನ್ನು ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದು ಅರವಿಂದ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಜೊತೆಗೆ ನಾಯಿಗಳಿಗಾಗಿ ಇಲ್ಲಿ ಈಜುಕೊಳ, ಹುಲ್ಲುಗಾವಲು ಪ್ರದೇಶ, ವರ್ತುಲ ಕ್ರೀಡಾಂಗಣ, ಹಲವು ಆಟೋಟಗಳು ಇದರಲ್ಲಿವೆ. ಅಲ್ಲದೆ ದೊಡ್ಡ ಮತ್ತು ಚಿಕ್ಕ ನಾಯಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆಯಿದೆ ಎಂದು ಅವರು ಮಾಹಿತಿ ಹಂಚಿ ಕೊಂಡಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
