ನವದೆಹಲಿ:
15 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗೌತಮ್ ಗಂಭೀರ್ ಅವರು ಕ್ರಿಕೆಟ್ ಎಲ್ಲಾ ಸ್ವರೂಪಗಳಿಂದ ನಿವೃತ್ತಿಯನ್ನು ಘೋಷಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ ಮಂಗಳವಾರ ಅವರು ಭಾವನಾತ್ಮಕವಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ವೀಡಿಯೊದಲ್ಲಿ ನಿವೃತಿ ಪ್ರಕಟಿಸಿದ್ದಾರೆ . ಗಂಭೀರ್ ಅವರು 2016 ರಲ್ಲಿ ಇಂಗ್ಲೆಂಡ್ ವಿರುದ್ಧ ರಾಜ್ಕೋಟ್ನಲ್ಲಿ ಆಡಿದ ನಂತರ ನಿವೃತ್ತರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿ 58 ಪಂದ್ಯಗಳಿಂದ 4154 ರನ್ ಗಳಿಸಿದ್ದು, ಏಕದಿನ ಪಂದ್ಯಗಳಲ್ಲಿ 5238 ರನ್ ಮತ್ತು ಟಿ 20ಐಗಳಲ್ಲಿ 932 ರನ್ ಗಳಿಸಿದ್ದಾರೆ. ಡಿಸೆಂಬರ್ 6 ರಿಂದ ಆಂಧ್ರಪ್ರದೇಶದ ವಿರುದ್ಧ ರಣಜಿ ಟ್ರೋಫಿಯಲ್ಲಿ ದೆಹಲಿಗೆ ಕೊನೆಯ ಪಂದ್ಯ ಆಡಲಿದ್ದೇನೆ ಎಂದು ಹೇಳುವ ಮೂಲಕ ಆಘಾತ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







