ಚೆನ್ನೈ:
ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ಕಾಲಿವುಡ್ ನಟ ಧನುಷ್ ನಡುವಿನ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಯನತಾರಾಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
ಈ ಹಿಂದೆ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ನಯನತಾರಾ ಅವರ ಜೀವನದ ಕುರಿತ ಸಾಕ್ಷ್ಯಚಿತ್ರ ‘ನಯನತಾರಾ ಬಿಯಾಂಡ್ ದಿ ಫೇರಿ ಟೇಲ್’ ನಲ್ಲಿ ನಟ ಧನುಷ್ ನಿರ್ಮಾಣದ ‘ನಾನುಮ್ ರೌಡಿ ದಾನ್’ (ನಾನೂ ರೌಡಿನೇ) ಚಿತ್ರದ ಕ್ಲಿಪ್ ಗಳನ್ನು ನಿರ್ಮಾಣ ಸಂಸ್ಥೆಯ ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿತ್ತು. ಇದರ ವಿರುದ್ಧ ನಟ ಧನುಷ್ ಕಾನೂನು ಸಮರ ಸಾರಿದ್ದರು. ಈ ವಿಚಾರ ನಟ ಧನುಷ್ ಮತ್ತು ನಟಿ ನಯನತಾರಾ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಇದೀಗ ಈ ಕಾನೂನು ಸಮರದಲ್ಲಿ ನಟ ಧನುಷ್ ಮುನ್ನಡೆ ಸಾಧಿಸಿದ್ದಾರೆ.
