ನೀಟ್‌-ಯುಜಿ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿ ಪ್ರಕಟ….!

ನವದೆಹಲಿ:

    ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌-ಯುಜಿ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೋಮವಾರ ಪ್ರಕಟಿಸಿದೆ.

    ಈ ಹಿಂದೆ ಮರು ಪರೀಕ್ಷೆ ಬರೆಯಲು ಅನುಮತಿ ಸಿಕ್ಕ 1,563 ಅಭ್ಯರ್ಥಿಗಳಿಗೆ ಈ ಮರು ಪರೀಕ್ಷೆಯನ್ನು ನಡೆಸಲಾಗಿದ್ದು ಅವರ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದೆ.ಈ ಫಲಿತಾಂಶ ಪ್ರಕಟದ ಜೊತೆಗೆ ಎಲ್ಲಾ 24 ಲಕ್ಷ ವಿದ್ಯಾರ್ಥಿಗಳ ರಾಂಕಿಂಗ್ ಕೂಡ ಬದಲಾಗಿದ್ದು, ತಮ್ಮ ತಮ್ಮ ರ್ಯಾಂಕಿಂಗ್ ಯಾವ ಹಂತದಲ್ಲಿ ಏರಿಳಿತವಾದಿರಬಹುದು ಎಂಬುದನ್ನು ವಿದ್ಯಾರ್ಥಿಗಳು ಪರಿಶೀಲಿಸುತ್ತಿದ್ದಾರೆ.

   ಮೇ 5 ರಂದು ನಡೆದ ಮೂಲ ನೀಟ್ ಯುಜಿ ಪರೀಕ್ಷೆಯ ಸಮಯದಲ್ಲಿ ಉಂಟಾದ “ಸಮಯದ ನಷ್ಟ” ದಿಂದಾಗಿ ಹೆಚ್ಚುವರಿ ಅಂಕಗಳನ್ನು ಈ 1563 ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಈ ಅಭ್ಯರ್ಥಿಗಳು ಪರೀಕ್ಷೆಯನ್ನು ಮರುಪಡೆಯಲು ಅಥವಾ ಗ್ರೇಸ್ ಅಂಕಗಳಿಲ್ಲದೆ ತಮ್ಮ ಮೂಲ ಅಂಕಗಳನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಕೊಡಲಾಗಿತ್ತು.

   ಜೂನ್ 23 ರಂದು ನಡೆದ ಮರು ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪೈಕಿ 813 ಮಂದಿ ಮಾತ್ರ ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದರು.

   ಜೂನ್ 4 ರಂದು ಘೋಷಿಸಲಾದ ಮೂಲ NEET UG 2024 ಪರೀಕ್ಷೆಯ ಫಲಿತಾಂಶಗಳು, ಪೇಪರ್ ಸೋರಿಕೆ ಮತ್ತು ಅಕ್ರಮಗಳ ಆರೋಪಗಳಿಂದ ವಿವಾದವನ್ನು ಎದುರಿಸಿದ್ದು, ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಅಂದರೆ 67 ವಿದ್ಯಾರ್ಥಿಗಳು ಈ ಸಲ 720 ರಲ್ಲಿ 720 ಪರಿಪೂರ್ಣ ಅಂಕಗಳನ್ನು ಪಡೆದು ಒಟ್ಟಾರೆ ನೀಟ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜನರು ಮತ್ತು ಶಿಕ್ಷಣ ತಜ್ಞರಲ್ಲಿ ಅನುಮಾನ ಮೂಡಿಸಿತ್ತು. ಶಿಕ್ಷಣ ಸಚಿವಾಲಯವು ಈ ವಿಷಯವನ್ನು ನಂತರ ಸಿಬಿಐ ತನಿಖೆಗೆ ಒಪ್ಪಿಸಿದ್ದು, ಈಗ ಸಿಬಿಐ ತನಿಖೆ ನಡೆಯುತ್ತಿದೆ.

    ಮರು ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ NTA ವೆಬ್‌ಸೈಟ್ https://neet.nta.nic.in/ ನಲ್ಲಿ ನೋಡಬಹುದಾಗಿದೆ. ವೆಬ್‌ಸೈಟ್‌ನಲ್ಲಿ ಒದಗಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ಅವರು ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link