ಎನ್‌ಎಸ್‌ಜಿಗೆ ನೂತನ ಮುಖ್ಯಸ್ಥರ ನೇಮಕ …!

ನವದೆಹಲಿ:

  ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿದೆ. ಶ್ರೀನಿವಾಸನ್‌ ಅವರು ಬಿಹಾರ ಕೆಡರ್‌ನ 1992ರ ಬ್ಯಾಚ್‌ ಐಪಿಎಸ್‌ ಅಧಿಕಾರಿಯಾಗಿದ್ದಾರೆ.

   ‘ಶ್ರೀನಿವಾಸನ್‌ ಅವರನ್ನು ಎನ್‌ಎಸ್‌ಜಿ ಮಹಾ ನಿರ್ದೇಶಕರನ್ನಾಗಿ ನೇಮಿಸಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರ ಅಧಿಕಾರ ಅವಧಿಯು 2027ರ ಆಗಸ್ಟ್‌ 31ರ ವರೆಗೆ ಇರಲಿದೆ’ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಿದೆ.

   ಕ್ಯಾಬಿನೆಟ್​​ನ ನೇಮಕಾತಿ ಸಮಿತಿಯು ಶ್ರೀನಿವಾಸನ್ ಅವರನ್ನು ಎನ್ಎಸ್ ಜಿಯ ಮಹಾನಿರ್ದೇಶಕರಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ, ಈ ಹುದ್ದೆಗೆ ಸೇರ್ಪಡೆಗೊಂಡ ದಿನಾಂಕದಿಂದ ಮತ್ತು ಆಗಸ್ಟ್ 31, 2027 ರವರೆಗೆ ಶ್ರೀನಿವಾಸನ್​ ಎನ್​​ಎಸ್​​ಜಿಯ ಮಹಾನಿರ್ದೇಶಕರಾಗಿರಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಮಹಾನಿರ್ದೇಶಕರಾಗಿ ನಿಯೋಜಿಸಲಾದ ನಲಿನ್ ಪ್ರಭಾತ್ ನಿರ್ಗಮನದ ಬಳಿಕ ಎನ್‌ಎಸ್‌ಜಿ ಡೈರೆಕ್ಟರ್ ಜನರಲ್ ಆಗಿ ಬಿಹಾರ ಕೇಡರ್​ನ 1992 ರ ಬ್ಯಾಚ್ ಐಪಿಎಸ್ ಅಧಿಕಾರಿ ಶ್ರೀನಿವಾಸನ್ ಅವರನ್ನು ನೇಮಕ ಮಾಡಲಾಗಿದೆ.

Recent Articles

spot_img

Related Stories

Share via
Copy link