ಹೊಸದಿಲ್ಲಿ:
ಸೆ.1ರಿಂದ ಮೊಬೈಲ್ ನಂಬರ್‌ಗಳಿಗೆ ಬ್ಯಾಂಕ್ ಹಾಗೂ ಇತರ ವೇದಿಕೆಗಳಿಂದ ಬರುವ ಒಟಿಪಿ ನಿಂತು ಹೋಗುವ ಸಾಧ್ಯತೆ ಇದೆ. ಹೀಗಾದಲ್ಲಿ ಸಾರ್ವಜನಿ ಕರು ಲಾಗ್‌ಇನ್, ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಸ್ಪ್ಯಾಮ್ ಮೆಸೇಜ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಯ್ ಹೊರಡಿಸಿದ್ದ ಆದೇಶ ಸೆ.1ರಿಂದ ಜಾರಿಯಾಗಲಿದೆ. ಮೊಬೈಲ್ ಕಂಪೆನಿಗಳ ಜತೆ ನೊಂದಣಿ ಮಾಡಿಕೊಂಡಿಲ್ಲದಿದ್ದರೆ, ಅಂತಹ ಕಂಪೆನಿ ಗಳ ಮೆಸೇಜನ್ನು ನಿರ್ಬಂಧಿಸುವಂತೆ ಸೂಚಿಸಿತ್ತು. ಕಂಪನಿಗಳು ಇನ್ನೂ ಸಹ ತಮ್ಮ ಮೆಸೇಜ್‌ನ ಶೈಲಿ ಯನ್ನು ಮೊಬೈಲ್ ನೆಟ್‌ವರ್ಕ್ ಕಂಪೆನಿಗಳಿಗೆ ನೀಡಿ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಇಂತಹ ಮೆಸೇಜ್‌ಗಳಿಗೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ.