ಭಾರತೀಯ ರೈಲ್ವೆಯ ನೂತನ ಪ್ರಯೋಗ

ಮುಂಬೈ:

   ಇದೇ ಮೊದಲ ಬಾರಿಗೆ ರೈಲಿನಲ್ಲಿ ಎಟಿಎಂ ಸೌಲಭ್ಯ ಅಳವಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಮಾಹಿತಿಯ ಪ್ರಕಾರ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಇದೇ ಮೊದಲ ಬಾರಿಗೆ ಎಟಿಎಂ ಅಳವಡಿಸಿಲಾಗಿದೆ ಎನ್ನಲಾಗಿದೆ.

    ಇದರಿಂದ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್ ಎಟಿಎಂ ಹೊಂದಿದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೈಲಿನ ಹವಾನಿಯಂತ್ರಿತ ಕೋಚ್‌ನಲ್ಲಿ ಎಟಿಎಂ ಅನ್ನು ಸ್ಥಾಪಿಸಲಾಗಿದ್ದು, ಅದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಯಂತ್ರವು ರೈಲು ಚಲಿಸುತ್ತಿರುವಾಗಲೂ ಪ್ರಯಾಣಿಕರು ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದನ್ನು ಭಾರತೀಯ ರೈಲ್ವೆಯ ನವೀನ ಮತ್ತು ಶುಲ್ಕ ರಹಿತ ಆದಾಯ ಯೋಜನೆಯ ಭಾಗವಾಗಿ ಪರಿಚಯಿಸಲಾಗಿದೆ.ಈ ಉಪಕ್ರಮವು ಭಾರತೀಯ ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಸಹಯೋಗದ ಫಲಿತಾಂಶವಾಗಿದೆ.ಪರೀಕ್ಷೆಯು ಚೆನ್ನಾಗಿ ನಡೆಯಿತು, ಪ್ರಯಾಣದುದ್ದಕ್ಕೂ ಯಂತ್ರವು ಸರಾಗವಾಗಿ ಕಾರ್ಯನಿರ್ವಹಿಸಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.