ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮುಂದಿನ ವಾರ ಬರಲಿದೆ ನಾಲ್ಕನೇ ರೈಲು

ಬೆಂಗಳೂರು:

    ಆರ್.ವಿ ರೋಡ್​ನಿಂದ ಬೊಮ್ಮಸಂದ್ರವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್​ಗೆ  ಆಗಸ್ಟ್ 10ರಂದು ಚಾಲನೆ ದೊರೆತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅವರಿಂದಲೇ ಮೆಟ್ರೋ ಮಾರ್ಗ ಲೋಕಾರ್ಪಣೆಯಾಗಿದೆ. ಸದ್ಯ ಈ ಮಾರ್ಗದಲ್ಲಿ ಸಂಚಾರ ಮಾಡಲು ನಮ್ಮ ಮೆಟ್ರೋ ಬಳಿ ಕೇವಲ ಮೂರು ರೈಲುಗಳಿದ್ದು, ಮುಂದಿನ ವಾರದಿಂದ ನಾಲ್ಕನೇ ರೈಲು ಪ್ರಯಾಣ ಆರಂಭಿಸಲಿದೆ ಎಂದು ಗೊತ್ತಾಗಿದೆ. ಕೊಲ್ಕತ್ತಾದಿಂದ ನಾಲ್ಕನೇ ರೈಲಿನ ಸೆಟ್ ಬಿಎಂಆರ್ಸಿಎಲ್ ಡಿಪೋಗೆ ಬಂದಿದೆ.

    ಈಗ ಮೂರೇ ರೈಲುಗಳಿರುವುದರಿಂದ 25 ನಿಮಿಷಕ್ಕೊಂದರಂತೆ ರೈಲು ಸಂಚಾರ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಹೆಚ್ಚು ಹೊತ್ತು ಕಾಯಬೇಕಾಗಿದೆ. ಈಗಾಗಲೇ ಕೊಲ್ಕತ್ತಾದಿಂದ ನಾಲ್ಕನೇ ರೈಲಿನ ಸೆಟ್ ಬಿಎಂಆರ್ಸಿಎಲ್ (BMRCL) ಡಿಪೋಗೆ ಬಂದಿದ್ದು, ನಾಲ್ಕನೇ ರೈಲಿನ ಟ್ರಯಲ್ ರನ್ ಕೂಡ ಯಶ್ವಸಿಯಾಗಿದೆ. ಅಕ್ಟೋಬರ್​ನಲ್ಲಿ ಕೊಲ್ಕತ್ತಾದಿಂದ ನಮ್ಮ ಮೆಟ್ರೋಗೆ ಐದನೇ ರೈಲು ಕೂಡ ಆಗಮಿಸಲಿದೆ ಎನ್ನಲಾಗಿದೆ. ನಂತರ ಪ್ರತಿ ತಿಂಗಳು ಒಂದು ಮೆಟ್ರೋ ರೈಲು ಸೆಟ್ ನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿವೆ. ಹೊಸ ರೈಲಿನ ಆಗಮನದಿಂದ 15 ರಿಂದ 20 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ.

   ಆಗಸ್ಟ್ 11 ರಿಂದ ನಮ್ಮ ಮೆಟ್ರೋದ ಮೂರು ಮಾರ್ಗದಲ್ಲೂ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿ ದಿನ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಯೆಲ್ಲೋ ಲೈನ್​ನಲ್ಲಿ ಕೇವಲ ಮೂರು ರೈಲುಗಳಿರುವ ಕಾರಣದಿಂದಾಗಿ, ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ. 2026ರ ಮಾರ್ಚ್ ವೇಳೆಗೆ ಯೆಲ್ಲೋ ಲೈನ್​​ಗೆ ಎಲ್ಲಾ ರೈಲುಗಳು ಆಗಮಿಸಲಿದ್ದು, ಗ್ರೀನ್ ಮತ್ತು ಪರ್ಪಲ್ ಲೈನ್ ರೀತಿಯಲ್ಲಿ ಐದು ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡಲಿವೆ. 25 ನಿಮಿಷಕ್ಕೊಂದರಂತೆ ರೈಲು ಸಂಚಾರ ಮಾಡುತ್ತಿರುವುದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ಹೊಸ ರೈಲು ಆಗಮನದಿಂದ ತುಂಬಾ ಸಹಾಯ ಆಗಲಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

    ಯೆಲ್ಲೋ ಲೈನ್ ಮೆಟ್ರೋ ರೈಲು ಸಾವಿರಾರು ಐಟಿಬಿಟಿ ಕಂಪನಿಗಳಿರುವ ಪ್ರದೇಶಗಳಲ್ಲಿ ಹಾದುಹೋಗುತ್ತಿದ್ದು, ಲಕ್ಷಾಂತರ ಜನರಿಗೆ ಅನುಕೂಲ ಆಗಲಿದೆ. ಹೊಸ ರೈಲು ಸಂಚಾರದಿಂದ ದೊಡ್ಡ ಮಟ್ಟದಲ್ಲಿ ಸಹಾಯವಾಗುವುದರಲ್ಲಿ ಅನುಮಾನವಿಲ್ಲ.

Recent Articles

spot_img

Related Stories

Share via
Copy link