ಅಥಣಿ :
ನಮ್ಮ ಆರ್.ಎಸ್.ಪಿ ಸಮೂಹ ಸಂಸ್ಥೆಯ ಮತ್ತೊಂದು ಮೈಲುಗಲ್ಲು ಅದು ಆರ್ ಎಸ್ ಪಿ ಫಿಲ್ಮ್ ಪ್ರೋಡಕ್ಷನ್ ಎಂಬ ನನ್ನ ಕನಸಿನ ಬ್ಯಾನರ ಮುಖಾಂತರ “ರತ್ನಾಪುರ ಭಂಡಾರ ನಿಧಿ” ಎಂಬ ನನ್ನ ಚೊಚ್ಚಲ ಕನ್ನಡ ಚಲನಚಿತ್ರ ನಿರ್ಮಾಪಕನಾಗಿ ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗಿದೆ ನನ್ನ ಕನಸಿನ ಚಲನಚಿತ್ರ ಯಶಸ್ವಿಯಾಗಿ ಮೂಡಿ ಬರಲು ತಮ್ಮಶುಭ ಹಾರೈಕೆಗಳು ಇರಲಿ ಎಂದು ಆರ್.ಎಸ್. ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ರವಿ ಎಸ್ ಪೂಜಾರಿ ಹೇಳಿದರು.
ರವಿವಾರ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಅಥಣಿಯ ಆರ್ ಎಸ್ ಪಿ ಸಭಾಂಗಣದಲ್ಲಿ ಚಾಲನೆ ನೆರವೇರಿತು. ಮೊದಲ ಸನ್ನಿವೇಶಕ್ಕೆ ಉದ್ಯಮಿ ಆರ್ ಎಸ್ ಪಿ ಸಮೂಹ ಸಂಸ್ಥೆ ಅಧ್ಯಕ್ಷ ಉದ್ಯಮಿ ರವಿ ಪೂಜಾರಿ ಆರಂಭ ಫಲಕ ತೋರಿದರು. ರವಿ ಪೂಜಾರಿಯವರ ಶ್ರೀಮತಿ ಕ್ಯಾಮೆರಾ ಚಾಲನೆ ಮಾಡಿದರು.ಈ ವೇಳೆ ಮಾತನಾಡಿದ ನಿರ್ಮಾಪಕ ರವಿ ಪೂಜಾರಿ ಬೆಂಗಳೂರು ಪ್ರತಿಯೊಂದುಕ್ಕೂ ಬೆಂಗಳೂರು ಮೈಸೂರು ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿದ್ದು ಉತ್ತರ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕಲಾವಿದರು ನಿರ್ಲಕ್ಷಕ್ಕೆ ಒಳಗಾಗುತ್ತಿದ್ದು ಅವರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ನಾವು ಮೊದಲ ಪ್ರಯತ್ನ ಮಾಡುತ್ತಿದ್ದೇವೆ ಉತ್ತರ ಕರ್ನಾಟಕದ ಜನತೆ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಕಲಾ ಪ್ರತಿಭೆಗಳಿಗೆ ಬೆನ್ನು ತಟ್ಟುವ ಕೆಲಸ ಮಾಡಬೇಕೆಂದು ಹೇಳಿದರು.
ಸಿನಿಮಾ ಬಗ್ಗೆ ನಿರ್ದೇಶಕ ಹಾಲೇಶ ಲೋಕುರ್ ಮಾತನಾಡಿದ್ದು, ನಾನು ಮೂಲತಃ ಉತ್ತರ ಕರ್ನಾಟಕದವನಾಗಿದ್ದು ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ನೀಡಿದ್ದು ಉದ್ಯಮಿ ರವಿ ಪೂಜಾರಿ ಅವರು ನಿರ್ಮಾಪಕ ರಾಗಿದ್ದು ರವಿ ಅಣ್ಣನವರ ಸಂಪೂರ್ಣ ಸಹಾಯ ಸಹಕಾರದೊಂದಿಗೆ ಈ ಚಿತ್ರ ನಿರ್ಮಾಣವಾಗ ಲಿದೆ ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದರು.
ಈ ವೇಳೆ ರಂಗಭೂಮಿ ಕಲಾವಿದೆ ಚಿತ್ರದ ನಟಿ ಪ್ರೇರಣಾ , ಗಣ್ಯರಾದ ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಗಿರೀಶ ಬುಟಾಳಿ, ನಿರ್ದೇಶಕ ಹಾಲೇಶ ಲೋಕುರ , ಕ್ಯಾಮರಾ ಸದ್ದು ದಡೆದ, ಸಹ ಕಲಾವಿದರಾದ, ಸಕಾರಾಮ, ಸುನೀಲ, ಸೋಮನಾಥ, ಮಲ್ಲಿಕಾರ್ಜುನ, ಸಂಗಮೇಶ, ಎಡಿಟರ್ ಸಚೀನ್ ಶೇಟ್ಟಿ, ಸಂಗಿತ ಪ್ರಾನ್ನ ಬೋಜಶೆಟ್ಟರ, ಎಸ್ ಎಪ್ ಎಕ್ಷ ನಿಖೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು