ಪ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೂತನ ಕಛೇರಿ ಉದ್ಗಾಟನೆ….!

0
146

ಗುಬ್ಬಿ

   ಈಗಾಗಲೇ  ಒಳಚರಂಡಿಯ ನೀರು ಸಂಸ್ಕರಿಸಲು ಜಾಗ ಖರೀದಿಸಿದ್ದು ಬಾಕಿ ಉಳಿದಿರುವ ಕಾಮಗಾರಿಯನ್ನು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಮುಗಿಸಬೇಕು ಮತ್ತು ಪಟ್ಟಣದ ಅಭಿವೃದ್ಧಿ ಗೆ ಶ್ರಮಿಸಬೇಕು ಎಂದು  ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು ಅವರು ಗುಬ್ಬಿ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆಯೇಷಾ ತಾಸೀನಾ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶ್ವೇತಾ ರವರ ಕಚೇರಿ ಉದ್ಘಾಟಿಸಿ ಮಾತನಾಡಿದರು    

  ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕಚೇರಿ  ಪೂಜೆ ಇಂದು ಬೆಳಿಗ್ಗೆ 11 ಗಂಟೆಗೆ ವಿಶೇಷವಾಗಿ ನೆಡೆಯಿತು ಕಳೆದ 24 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಗುಬ್ಬಿಯ ಸಾರಥಿಯಾಗಿ ಆಯ್ಕೆ ಯಾಗಿದ್ದು ಇಂದು  ಅಧಿಕೃತವಾಗಿ ಅವರ ಕಚೇರಿಯಲ್ಲಿ  ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡರು ಈ ಕಾರ್ಯಕ್ರಮ ಬಹಳ ವಿಭಿನ್ನವಾಗಿಯೇ ಇತ್ತು ಮೊದಲು ಹಿಂದೂ ಸಂಪ್ರದಾಯದಂತೆ ಕಳಸ ಪ್ರತಿಷ್ಠಾನೆ ಮಾಡಿ ಪೂಜೆ ಸಲ್ಲಿಸಿದರು ನಂತರ ಮೌಲಿಗಳು ಪ್ರಾರ್ಥನೆ ಸಲ್ಲಿಸುವುದರ ಮೂಲಕ ನೂತನ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಆಶೀರ್ವದಿಸಿದರು,

    ಗುಬ್ಬಿ ಪಟ್ಟಣ ಪಂಚಾಯಿತಿ ಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಆಯಿಷಾ ತಾಸೀನಾ, ಉಪಾಧ್ಯಕ್ಷ ರಾಗಿ ಶ್ರೀಮತಿ ಶ್ವೇತಾ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ, ಈ ಕಾರ್ಯಕ್ರಮ ದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಸಿ ಮೋಹನ್, ಕುಮಾರ್, ಜಿ ಆರ್ ಶಿವಕುಮಾರ್, ಜಿ ಸಿ ಕೃಷ್ಣಮೂರ್ತಿ, ಮಹಮದ್ ಸಾದಿಕ್, ರೇಣುಕಾ ಪ್ರಸಾದ್, ಶಶಿಕುಮಾರ್, ಶೋಕತ್ ಆಲಿ, ಮಹಮದ್ ಅಮ್ಜದ್ , ಮಂಗಳಮ್ಮ ರಾಜಣ್ಣ, ಮಮತಾ, ಮಹಾಲಕ್ಷ್ಮಿ , ಮುಖಂಡರಾದ ಜಿ ಎನ್ ಬೆಟ್ಟಸ್ವಾಮಿ, ಜಿ ಎಚ್ ಜಗನ್ನಾಥ್,ಜಿ ವಿ ಮಂಜುನಾಥ್. ಬಿ ಆರ್ ಭರತ್ ಗೌಡ,ಕೆ ಬಿ ಕೃಷ್ಣಪ್ಪ, ಜಿ ಎಮ್ ಬಸವರಾಜು ಈರಣ್ಣ, ನಾಗರಾಜು, ಲಕ್ಷಿನಾರಾಯಣ್ ಕೆ ಆರ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು