ಬೆಂಗಳೂರು :
ನಮ್ಮ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಗೀಳು ಜೀವನದ ಭಾಗವೇ ಆಗಿಬಿಟ್ಟಿದೆ. ಕೈಯಲ್ಲಿ ಒಂದು ಮೊಬೈಲ್, ಸೋಶಿಯಲ್ ಮೀಡಿಯಾದಲ್ಲಿ ಒಂದು ಅಕೌಂಟ್ ಇದ್ರೆ ಸಾಕು ವ್ಯಕ್ತಿಯೊಬ್ಬನ ಪರ್ಸನಲ್ ಲೈಫ್ ಕಾಣದ ವ್ಯಕ್ತಿಗೂ ಚಿರಪರಿಚಿತವಾಗಿ ಬಿಡುತ್ತದೆ. ಸ್ಟೇಟಸ್, ಫೋಟೋಗಳ ಮೂಲಕ ನಮ್ಮ ಇಂಚಿಂಚು ಮಾಹಿತಿ ಕೂಡ ಹರಿದಾಡುತ್ತಿರುತ್ತದೆ.
ಕೊಂಚ ಮೈ ಮರೆತ್ರು ಅನಾಹುತ ಫಿಕ್ಸ್, ಹೌದು ಕೆಲವೊಮ್ಮೆ ನಾನು ಮಾಡುವ ಸಣ್ಣ-ಪುಟ್ಟ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ದೇಶ-ವಿದೇಶಗಳಿಗೆ ಹೋಗುವವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವ ಮುನ್ನ ಈ ಸ್ಟೋರಿ .
ಸ್ಯಾಂಡಲ್ವುಡ್ನ ನಟ, ನಿರ್ದೇಶಕ ರಾಕ್ಲೈನ್ ವೆಂಕಟೇಶ್ ಸೊದರನ ಫ್ಯಾಮಿಲಿ ವಿದೇಶಕ್ಕೆ ತೆರಳಿದ್ದ ವೇಳೆ ಅವರ ಮನೆಯಲ್ಲಿ ಕಳ್ಳತನವಾಗಿದೆ. 5 ಕೆಜಿ ಚಿನ್ನ ಕಳ್ಳತನವಾಗಿದ್ದು, ಕೋಟಿ ಕೋಟಿ ಕಳ್ಳನ ಪಾಲಾಗಿದೆ ಇದಕ್ಕೆಲ್ಲಾ ಕಾರಣವಾಗಿದ್ದು ಕುಟುಂಬಸ್ಥರೇ ಮಾಡಿದ ಸಣ್ಣ ತಪ್ಪು, ರಾಕ್ಲೈನ್ ತಮ್ಮ ಬ್ರಹ್ಮೇಶ್ ಫ್ಯಾಮಿಲಿ ಯೂರೋಪ್ ಟ್ರಿಪ್ ಹೋಗಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು.
ಫ್ಯಾಮಿಲಿ ಮಂದಿ ವಿದೇಶಕ್ಕೆ ಹಾರಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದಾರೆ. ಬಂಡವಾಳ ಮಾಡಿಕೊಂಡ ಕಳ್ಳರು ರಾಕ್ಲೈನ್ ತಮ್ಮ ಬ್ರಹ್ಮೇಶ್ ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ದೋಚಿಕೊಂಡು ಪರಾರಿಯಾಗಿದ್ದಾರೆ. ಅಷ್ಟಕ್ಕೂ ಯೂರೋಪ್ ಟ್ರಿಪ್ ಹೋಗಿರೋ ಬಗ್ಗೆ ಮಾಹಿತಿ ಹೇಗ್ ಲೀಕ್ ಆಗಿದ್ದು ಹೇಗೆ ಗೊತ್ತಾ?
ಬ್ರಹ್ಮೇಶ್ ಕುಟುಂಬ ಫೇಸ್ ಬುಕ್ನಲ್ಲಿ ಫೋಟೋ ಶೇರ್ ಮಾಡಿ ಕಳ್ಳರಿಗೆ ದಾರಿಮಾಡಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ ನೋಡಿದ ಖದೀಮರು. ಐಷಾರಾಮಿ ಮನೆಗೆ ಕನ್ನ ಹಾಕಲು ಕಳ್ಳರು ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡವಿತ್ತು. ಕಟ್ಟಡದಿಂದ ಬ್ರಹ್ಮೇಶ್ ಮನೆಗೆ ಜಂಪ್ ಮಾಡಿ ಕಳ್ಳತನ ಮಾಡಿದ್ದಾರೆ.