ಗುತ್ತಿಗೆದಾರರ ಬಿಲ್‌ ಪಾವತಿಗೆ BBMP ಹೊಸ ಯೋಜನೆ..!

ಬೆಂಗಳೂರು

    ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಸಿದ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ 400 ಕೋಟಿ ರೂಪಾಯಿ ಬ್ಯಾಂಕ್ ಗಳಿಂದ  ಸಾಲ ಪಡೆಯಲು ಬಿಬಿಎಂಪಿಗೆ ಸರ್ಕಾರ ಅನುಮತಿ ನೀಡಿದೆ.

     BBMP ಒಂದು ವಿನೂತನ ಯೋಜನೆ ತರುತ್ತಿದ್ದು ಅದರಿಂದಲೇ ಎರಡು ವರ್ಷಗಳವರೆಗೆ ಬಾಕಿ ಬಿಲ್ ಪಾವತಿಗೆ ಕಾಯುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಯಾಗಲಿದೆ. ಗುತ್ತಿಗೆದಾರರು ಬ್ಯಾಂಕ್ ಬಡ್ಡಿದರ ಪಾವತಿಸಲು ಈ ಹೊಸ ವ್ಯವಸ್ಥೆ ಸಹಕಾರಿಯಗಲಿದೆ. ಒಟ್ಟಾರೆ ಗುತ್ತಿಗೆದಾರರಿಗೆ 2020-2021, 2021-2022 ಹಾಗೂ 2022-2023 ವರ್ಷಗಳಲ್ಲಿನ ಕಾಮಗಾರಿ ಹಣ 2,782 ಕೋಟಿ ರೂ. ಬರಬೇಕಿದೆ.

    ಹೊಸ ಯೋಜನೆಯಡಿ ಆಯ್ಕೆಯಾದ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರ ಪಟ್ಟಿಯನ್ನು ಸಾರ್ವಜನಿಕ ಡೊಮೈನ್‌ನಲ್ಲಿ ಲಭ್ಯವಾಗುವಂತೆ ಅಳವಡಿಸಬೇಕು.

    ಆ ಮೂಲಕ ಪಾರದರ್ಶಕ ಕಾರ್ಯವಿಧಾನವನ್ನು ರಚಿಸಲು ಸರ್ಕಾರ ತಿಳಿಸಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಜೇಷ್ಠತಾ ಪಟ್ಟಿ ಆಧರಿಸಿ ಬಾಕಿ ಬಿಲ್ ಪಾವತಿಯಾಗಲಿದೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ‘ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ವ್ಯವ‌ಸ್ಥೆ’  ತರಲಾಗುತ್ತಿದೆ.

    ಇದರಿಂದಲೇ ಕಾಮಗಾರಿಗಳ ಬಾಕಿ ಬಿಲ್‌ ಗುತ್ತಿಗೆದಾರರಿಗೆ ಪಾವತಿ ಆಗಲಿದೆ. ಈ ವ್ಯವಸ್ಥೆಯಲ್ಲೂ ಬಿಲ್‌ಗಳ ಜೇಷ್ಠತೆಯಡಿ ಬಿಬಿಎಂಪಿ ಹಣ ನೀಡಲಿದೆ. ಈ ವ್ಯವಸ್ಥೆಯಲ್ಲಿ ಸುಳ್ಳು ಬಿಲ್‌ ಸಲ್ಲಿಸಿ ಹಣ ಪಡೆಯಲು ಅವಕಾಶ ಇಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಗುತ್ತಿಗೆದಾರರ ಕೆಲಸವನ್ನು ಕಾರ್ಯಗತಗೊಳಿಸಲು ಮೂರನೇ ವ್ಯಕ್ತಿಗಳಿಂದ ಎರವಲು ಪಡೆದ ಅಥವಾ ಆರ್ಥಿಕ ಸಹಾಯವನ್ನು ಪಡೆದವರಿಗೆ ಈ ಯೋಜನೆ/ವ್ಯವಸ್ಥೆಯಿಂದ ವಿಶೇಷ ಪ್ರಯೋಜನ ಸಿಗಲಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link