ಕೇರಳ :
ಕಕ್ಷೀದಾರರು ನ್ಯಾಯಾಲಯ ನೋಟಿಸ್ ಸ್ವೀಕರಿಸದ ಸಮಸ್ಯೆ ಪರಿಹರಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಕೇರಳದಲ್ಲಿ ನೂತನ ವ್ಯವಸ್ಥೆಯೊಂದು ಜಾರಿಗೆ ಬರುತ್ತಿದೆ.
ಅಂಚೆ ಇಲಾಖೆ ಸಹಯೋಗದಲ್ಲಿ ಕೇರಳ ಹೈಕೋರ್ಟ್ ಹೊಸ ಹೆಜ್ಜೆ ಇರಿಸಿದ್ದು, ಇನ್ನು ಕೋರ್ಟ್‌ಗೆ ಹಾಜರಾಗುವಂತೆ ಕಕ್ಷಿದಾರರಿಗೆ ಇ-ಪೋಸ್ಟ್ ಮೂಲಕ ನೋಟಿಸ್ ಕಳುಹಿಸಲಾಗುತ್ತಿದೆ.
ಈ ಮೂಲಕ ಇಂತಹಾ ವ್ಯವಸ್ಥೆ ಆರಂಭಿಸಿದ ದೇಶದ ಮೊದಲ ಕೋರ್ಟ್ ಎಂಬ ಹೆಗ್ಗಳಿಕೆಗೆ ಕೇರಳ ಹೈಕೋರ್ಟ್ ಪಾತ್ರವಾಗಲಿದೆ.
ಹೈಕೋರ್ಟ್‌ನಲ್ಲಿ ದಾಖಲಾದ ಪ್ರಕರಣಗಳಲ್ಲಿ ಬಹಳಷ್ಟು ಬಾರಿ ನೋಟಿಸ್ ಜಾರಿ ಮಾಡಿದ ನಂತರವೂ ಕಕ್ಷಿದಾರರು ನೋಟಿಸ್ ಸ್ವೀಕರಿಸದೆ ಸಮಸ್ಯೆ ಸೃಷ್ಟಿಸುತ್ತಾರೆ. ಇನ್ನು ನೋಟಿಸ್‌ಗಳು ತಡವಾಗಿ ಸ್ವೀಕೃತಿಯಿಂದ ವಿಚಾರಣೆ ವಿಳಂಬವಾಗುವ ಪ್ರಕರಣಗಳೂ ಹೆಚ್ಚುತ್ತಿವೆ. ಇ-ಪೋಸ್ಟಲ್ ವ್ಯವಸ್ಥೆಯಲ್ಲಿ ಕಕ್ಷಿದಾರರಿಗೆ ಒಂದೇ ದಿನದಲ್ಲಿ ನೋಟಿಸ್ ನೀಡಬಹುದಾಗಿದೆ. ಜೊತೆಗೆ ಕಳುಹಿಸಲಾದ ಸೂಚನೆಗಳನ್ನು ಕಕ್ಷಿದಾರರು ಸ್ವೀಕರಿಸಿದ್ದಾರೆಯೇ, ಇಲ್ಲವೇ ಎಂಬುದನ್ನೂ ಖಚಿತಪಡಿಸಿಕೊಳ್ಳಬಹುದಾಗಿದೆ. ಇದರ ಮೊದಲ ಹಂತದಲ್ಲಿ ತಿರುವನಂತಪುರಂ ಜಿಲ್ಲೆಯ ಕಕ್ಷಿದಾರರಿಗೆ ಈ ವ್ಯವಸ್ಥೆಯ ಮೂಲಕ ನೋಟಿಸ್ ಕಳುಹಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
