ಮುಂಬೈ:
ದೇಶದಲ್ಲಿ ಮತ್ತೆ ಕೊರೋನಾ ಆತಂಕ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಹೊಸ ರೂಪಾಂತರಿ KP.2ನ 92 ಪ್ರಕರಣಗಳು ದಾಖಲಾಗಿವೆ. ಪುಣೆಯಲ್ಲಿ 51 ಕೇಸ್ ಗಳು ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ಸೋಮವಾರ ತಿಳಿಸಿದೆ.
ಥಾಣೆಯಲ್ಲಿ ಕೊರೊನಾ ಹೊಸ ವೈರಸ್ ಓಮಿಕ್ರಾನ್ ಸಬ್‌ವೇರಿಯಂಟ್ KP.2ನ 20 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅಮರಾವತಿ, ಛತ್ರಪತಿ ಸಾಂಬಾಜಿ ನಗರದಲ್ಲಿ ತಲಾ 7, ಸೊಲ್ಲಾಪುರದಲ್ಲಿ 2 ಹಾಗೂ ಸಾಂಗ್ಲಿ, ಲಾಟೂರ್, ಅಹಮದನಗರ, ನಾಸಿಕ್ ನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ ಎಂದು ರಾಜ್ಯದ ಜೀನೋಮ್ ಸೀಕ್ವೆನ್ಸಿಂಗ್ ಸಂಯೋಜಕ, ಡಾ ರಾಜೇಶ್ ತಿಳಿಸಿದ್ದಾರೆ.
ಸೋಮವಾರ ಮುಂಬೈ ಮತ್ತು ಪುಣೆ ನಗರದಲ್ಲಿ ಕೋವಿಡ್-19 ನ ಆರು ಹೊಸ ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.