ಕೊರಟಗೆರೆ:
ಕೊರಟಗೆರೆ ತಾಲ್ಲೂಕು ಒಣ ಪ್ರದೇಶಗಳಿಗೆ ಒಳಪಟ್ಟಿದ್ದು, ಕಳೆದ 20-25 ವರ್ಷಗಳಿಂದ ಮಳೆ ಇಲ್ಲದೆ ಬರಗಾಲ ಪೀಡಿತ ಪ್ರದೇಶವಾಗಿತ್ತು. ಮಳೆಗಾಲಕ್ಕೆ ತಕ್ಕಂತೆ ಮಳೆಬಾರದೆ ಬೇಸಾಯ ಬೆಳೆಗಳು ನೆಲ ಕಚ್ಚಿದ ಮೇಲೆ ಹವಾಮಾನ ವೈಪರೀತ್ಯದಿಂದ ಸತತ ಮಳೆಯಾಗಿ ರೈತರ ಬಾಳು ಮೂರಾಬಟ್ಟೆಯಾಗಿರುವುದು ಒಂದೆಡೆಯಾದರೆ, ಕಳೆದ 20-25 ವರ್ಷಗಳಿಂದ ಮಳೆ ಇಲ್ಲದೆ ಅಂತರ್ಜಲ ಕುಸಿದು ಕಂಗೆಟಿದ್ದ ರೈತರ ಬಾಳಿಗೆ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ತಾಲ್ಲೂಕಿನಲ್ಲಿ ಒಟ್ಟು 45 ಕೆರೆಗಳಿದ್ದು, ಇದರಲ್ಲಿ ರೈತರ ಜೀವನಾಡಿಗಳಂತಿರುವ 15 ಕ್ಕೂ ಹೆಚ್ಚು ಕೆರೆಗಳು ಬಹುತೇಕ ಭರ್ತಿಯ ಹಂತದಲ್ಲಿದ್ದರೆ, ಅತಿ ಹೆಚ್ಚು ಬೇಸಾಯ ಮಾಡುವ ಮಾವತ್ತೂರು ಕೆರೆ ಅರ್ಧಭಾಗ ತುಂಬಿದೆ. ಸಾವಿರಾರು ರೈತರ ಆಸರೆಯಾಗಿರುವ ಚಿಕ್ಕವಳ್ಳಿ ಕೆರೆಯಲ್ಲಿ ಅರ್ಧಕ್ಕಿಂತ ಕಡಿಮೆ ನೀರು ಶೇಖರಣೆಗೊಂಡಿದೆ. 45 ಕೆರೆಗಳಲ್ಲಿ 24 ಭರ್ತಿಯಾಗಿದ್ದರೆ, 14 ಅರ್ಧಕ್ಕಿಂತ ಹೆಚ್ಚು ತುಂಬಿವೆ, 4 ಕೆರೆಗಳು ಅಧರ್Àಕ್ಕಿಂತ ಕಡಿಮೆ ಇದ್ದು, ಹೇಮಾವತಿ ವ್ಯಾಪ್ತಿಯ ತೀತಾ ಜಲಾಶಯ (ಗೊರವನಹಳ್ಳಿ) ಸಹ ಹೆಚ್ಚು ಕಡಿಮೆ ತುಂಬುವ ಹಂತದಲ್ಲಿರುವುದು ರೈತರ ಬಾಳಿಗೆ ಭರವಸೆ ಮೂಡಿದಂತಾಗಿದೆ.
ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ಮಧ್ಯಮ ಒಣ ಪ್ರದೇಶವಾಗಿದ್ದು, ಸಾಧಾರಣ ಮಳೆ ಸಂಭವದ ಪ್ರದೇಶವಾದ್ದರಿಂದ ಸಾಮಾನ್ಯವಾಗಿ ಅತಿ ಕಡಿಮೆ ಮಳೆಯಾಗುತ್ತದೆ. ಆದರೆ ಇತ್ತೀಚೆಗೆ ವಾಯುಭಾರ ಕುಸಿತದಿಂದ ನೈಸರ್ಗಿಕ ವಿಪತ್ತು ಕಂಡು ಬಂದು, ಮಳೆಯ ರುದ್ರ ನರ್ತನಕ್ಕೆ 100ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಬೆಳೆ ಕಟಾವು ಮಾಡುವ ಹಂತದಲ್ಲಿ ಸತತ ಮಳೆಯಿಂದ ನೀರು ಪಾಲಾಗಿ, ಕೆಲವು ಕೊಚ್ಚಿ ಹೋಗಿದ್ದರೆ, ಮತ್ತೆ ಕೆಲವು ಬೆಳೆ ಮಣ್ಣು ಪಾಲಾಗಿ ಮೊಳಕೆ ಹೊಡೆಯುವ ಹಂತಕ್ಕೆ ತಲುಪಿ ರೈತರ ಬಾಳು ಬರಿದಾಗಿದೆ. ಮಳೆ ಕೇವಲ ಜನರನ್ನು ಸಂಕಷ್ಟಕ್ಕೆ ಮಾತ್ರ ಸಿಲುಕಿಸದೆ, ರೈತ ಬರಗಾಲ ಛಾಯೆಯಿಂದ ಹೊರಬರುವ ರೀತಿಯಲ್ಲಿ ಕೆರೆ-ಕುಂಟೆ ತುಂಬುತ್ತಿರುವುದು ರೈತರ ಬಾಳಲ್ಲಿ ಹೊಸ ಹುರುಪು ಮೂಡಿಸಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣ 61,761 ಹೆಕ್ಟೇರ್‍ಗಳಷ್ಟಿದ್ದು, ಸಾಗುವಳಿ ಯೋಗ್ಯವಾದ ಭೂಮಿ 34,723 ಹೆಕ್ಟೇರ್ ಇರುತ್ತದೆ. ತಾಲ್ಲೂಕಿನಲ್ಲಿ ಮುಖ್ಯವಾದ ಬೆಳೆಗಳೆಂದರೆ ಮುಸುಕಿನ ಜೋಳ, ರಾಗಿ, ತೊಗರಿ ಮತ್ತು ಶೇಂಗಾ ಹಾಗಿದ್ದು, ಮಳೆ ನವೆಂಬರ್ 2021 ರ 19ನೇ ತಾರೀಖಿಗೆ ವಾಡಿಕೆ ಮಳೆ 754 ಮಿ.ಮೀ ನಷ್ಟಿದ್ದು, ವಾಸ್ತವ ಮಳೆ 1186 ಮಿ.ಮೀ ಆಗಿರುತ್ತದೆ. ಅಂದರೆ ಶೇ. 57.29 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿ ಬೆಳೆ ನಷ್ಟವಾಗಿರುತ್ತದೆ. ಸೆಪ್ಟ್ಟೆಂಬರ್ ಮಾಹೆಯಲ್ಲಿ ಶೇ.75 ರಷ್ಟು ಮಳೆ ಕೊರತೆ ಕಂಡು ಬಂದು ಅಕ್ಟೋಬರ್‍ನಲ್ಲಿ ಬಿದ್ದ ಅತಿ ಹೆಚ್ಚು ಮಳೆಗೆ ಚೇತರಿಸಿಕೊಂಡ ಬೆಳೆಗಳು ಕಟಾವಿಗೆ ಬಂದಾಗ ಅಂದರೆ ಈಗ ಸತತ ಮಳೆಯಿಂದ ನೆಲಕ್ಕೆ ಬಿದ್ದು, ರಾಗಿ, ಭತ್ತ, ನೆಲಗÀಡಲೆ ಕಾಯಿ ಮೊಳಕೆ ಒಡೆಯಲಾರಂಭಿಸಿವೆ.
ನೆಲಗಡಲೆ ಕಾಯಿ ಗಿಡಗಳನ್ನು ಕಿತ್ತು ಅಲ್ಲಲ್ಲಿ ಹಾಕಿಕೊಂಡು ಬಿಡಿಸುವಾಗ ಹೆಚ್ಚು ಮಳೆಯಾಗಿ ಅಲ್ಲಿಯೂ ಸಹ ಮೊಳಕೆ ಒಡೆಯಲಾರಂಭಿಸಿವೆ. ಸೆಪ್ಟೆÀ್ಟಂಬರ್ ತಿಂಗಳಲ್ಲಿ ಬರದ ಛಾಯೆ ಇದ್ದು, ನವೆÀಂಬರ್‍ನಲ್ಲಿ ಹೆಚ್ಚು ಮಳೆಯಾದ ಪರಿಣಾಮ ಬೆಳೆಗಳು ಹಾನಿಯಾಗಿ ಮುಂದೆ ಜಾನುವಾರುಗಲಿಗೆ ಮೇವಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ. ರೈತನಿಗೆ ಒಂದೆಡೆ ಬೆಳೆ ಹಾನಿ, ಮತ್ತೊಂದೆಡೆ ಅಲ್ಪ ಸ್ವಲ್ಪ ಬೆಳೆ ತೆಗೆಯುವಾಗ ಮಳೆ ಹಾನಿಯಿಂದ ತತ್ತರಗೊಳ್ಳುವಾಗ ಕೆರೆ-ಕುಂಟೆ ತುಂಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅಶಾ ಭವನೆ ಮೂಡುವಂತಾಗಿದೆ.
ಒಟ್ಟಾರೆ ರೈತ 20-25 ವರ್ಷಗಳಿಂದ ಬರಗಾಲಕ್ಕೆ ಸಿಲುಕಿ, ಅಂತರ್ಜಲ ಮಟ್ಟ ಕುಸಿದು ತೋಟ ತುಡಿಕೆ ಕಳೆದುಕೊಂಡು, ಕೊಳವೆ ಬಾವಿಗಳನ್ನು ಕೊರೆÀಸಿ ಕೊರೆÀಸಿ ಸಾಲ ಸೋಲಕ್ಕೆ ಸಿಲುಕಿದ್ದ ರೈತನ ಮುಖದಲ್ಲಿ ಸತತ ಮಳೆ ಕೆರೆ-ಕುಂಟೆ ಭರ್ತಿಗಳಿಂದ ಹೊಸ ಹುಮಸ್ಸು ಮೂಡುತ್ತಿದೆ. ಮಾವತ್ತೂರು ಕೆರೆ ಹಾಗೂ ಚಿಕ್ಕಾವಳ್ಳಿ ಕೆರೆಗಳು ತುಂಬಿದರೆ ಇಡೀ ತಾಲ್ಲೂಕಿನ ಬಹಳಷ್ಟು ರೈತರುಗಳಿಗೆ ಅನುಕೂಲವಾಗಲಿದೆ. ಸಣ್ಣ ನೀರಾವರಿ ಇಲಾಖೆಯು ಕೆರೆ ತೂಬು ದುರಸ್ತಿ ಹಾಗೂ ಕೆರೆ ಏರಿಗಳ ಮೇಲಿನ ಗಿಡ ಗೆಂಟೆಗಳನ್ನು ತೆಗೆಯದೆ ಇರುವುದು ರೈತರ ಬೇಸರಕೂ ಕಾರಣವಾಗಿದೆ. ಕೆಲವೊಂದು ಚಾನಲ್ (ಕಾಲುವೆ)ಗಳನ್ನು ಸ್ವಚ್ಛಗೊಳಿಸದೆ ಇರುವುದು ಹಾಗೂ ಸರಿಯಾಗಿ ಅವುಗಳನ್ನು ನಿರ್ವಹಿಸದೆ ಇರುವುದರಿಂದ ಕೆಲವು ಕಡೆ ನೀರು ಪೋಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಹಿತಕ್ಕೆÀ ತಕ್ಕಂತೆ ಕೆರೆಗಳ ನೀರನ್ನು ಶೇಖರಿಸಿಟ್ಟರೆ ಮಾತ್ರ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನುಕೂಲಕರವಾಗಿ, ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತ ಸಹ ನಿಗಾ ವಹಿಸುವ ಅವಶ್ಯಕತೆ ತುರ್ತಾಗಿದೆ ಎಂಬುದು ಪ್ರಜ್ಞಾವಂತರ ಮಾತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ