ಮುಂಬೈ:
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಉದ್ದವ್ ಠಾಕ್ರೆ ” ನಾನು ಅದೃಷ್ಟವಂತ ಮುಖ್ಯಮಂತ್ರಿ ಎಕೆಂದರೆ, ಅಂದು ನನ್ನನ್ನು ವಿರೋಧಿಸುತ್ತಿದ್ದ ನಾಯಕರೇ ಇಂದು ನನ್ನ ಜೊತೆಗಿದ್ದಾರೆ” ಎಂದು ತಿಳಿಸಿದ್ದಾರೆ.
ನಾನು ಅದೃಷ್ಟವಂತ ಮುಖ್ಯಮಂತ್ರಿ ಏಕೆಂದರೆ, ಅಂದು ನನ್ನನ್ನು ವಿರೋಧಿಸುತ್ತಿದ್ದ ನಾಯಕರೇ ಇಂದು ನನ್ನ ಜೊತೆಗಾರರಾ ಗಿದ್ದಾರೆ. ನನ್ನ ಜೊತೆಗಿದ್ದವರು ವಿರೋಧ ಪಕ್ಷದ ಬದಿಯಲ್ಲಿದ್ದಾರೆ. ಜನರ ಆಶೀರ್ವಾದ ಹಾಗೂ ನನ್ನ ಅದೃಷ್ಟದಿಂದ ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದೇನೆ ನಾನು ಎಂದಿಗೂ ಯಾರೊಂದಿಗೂ ಹೇಳಿರಲಿಲ್ಲ.
ಹಿಂದಿನ ನನ್ನ ಗೆಳೆಯರಾದ ದೇವೇಂದ್ರ ಫಡ್ನವೀಸ್ ಅವರಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ನಾನು ಎಂದಿಗೂ ಅವರೊಂದಿಗೆ ಸ್ನೇಹಿತನಂತೆಯೇ ಇರುತ್ತೇನೆ. ನಾನು ಇಂದಿಗೂ ಹಿಂದುತ್ವ ಸಿದ್ಧಾಂತದ ಪರವಾಗಿಯೇ ಇದ್ದೇನೆ. ಅದನ್ನು ಎಂದಿಗೂ ಬಿಡುವುದಿಲ್ಲ. ಕಳೆದ 5 ವರ್ಷಗಳಲ್ಲಿ ನಾನೆಂದಿಗೂ ಸರ್ಕಾರಕ್ಕೆ ದ್ರೋಹ ಬಗೆದಿಲ್ಲ. ಫಡ್ನವೀಸ್ ಅವರನ್ನು ನಾನು ವಿರೋಧ ಪಕ್ಷದ ನಾಯಕರೆಂದು ಎಂದಿಗೂ ಕರೆಯುವುದಿಲ್ಲ. ಆದರೆ, ಅವರನ್ನು ಜವಾಬ್ದಾರಿಯುತ ನಾಯಕರೆಂದು ಕರೆಯುತ್ತೇನೆ. ನೀವು ನಮ್ಮೊಂದಿಗೆ ಉತ್ತಮವಾಗಿ ನಡೆದಕೊಂಡಿದ್ದಿದ್ದರೆ, ಶಿವಸೇನೆ-ಬಿಜೆಪಿ ಇಬ್ಭಾಗವಾಗುವ ಪರಿಸ್ಥಿತಿ ಎಂದಿಗೂ ಎದುರಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ