ಬೆಂಗಳೂರು
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಮಕ್ಕಳು ಗಾಬರಿಗೊಳ್ಳದೇ ಸಾಮಾಜಿಕ ಅಂತರದೊಂದಿಗೆ ಸ್ಯಾನಿಟೈಸರ್ ಬಳಸಿ ಸರ್ಕಾರದ ಸೂಚನೆಯನ್ನು ಅನುಸರಿಸಿ ಪರೀಕ್ಷೆ ಬರೆಯಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಸಲಹೆ ನೀಡಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಕಂಟೇನ್ಮೆಂಟ್ ಝೋನ್‍ನಿಂದ ಪರೀಕ್ಷೆ ಬರೆಯಲು ಬರುವ ಮಕ್ಕಳ ಬಗ್ಗೆ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಚರ್ಚಿಸಿ ಸಲಹೆ ನೀಡಲಾಗಿದೆ.ಈ ಬಗ್ಗೆ ಟಾಸ್ಕ್ ಫೋರ್ಸ್ ಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ ಎಂದರು.
15 ಕೆಟೆಗೆರಿಯಲ್ಲಿ ಆರೋಗ್ಯ ತಪಾಸಣೆ ಆಗಬೇಕು.
ಕೈಗಾರಿಕಾ, ಹೊರರಾಜ್ಯದಿಂದ ಬಂದವರಿಂದ ಸೋಂಕು ಸಮುದಾಯಕ್ಕೆ ಹರಡದಂತೆ ಪರೀಕ್ಷೆಗಳು ಆಗಬೇಕು.ಈ ಸಂಬಂಧ ಸೋಮವಾರ ಮತ್ತೆ ಟಾಸ್ಕ್ ಫೋರ್ಸ್ ಸಭೆ ಕರೆಯಲಾಗಿದೆ ಎಂದರು.
ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲು ತಜ್ಞರ ಸಮಿತಿ ಇದೆ. ವೈಯಕ್ತಿಕ ಅಭಿಪ್ರಾಯಗಳು ಬೇರೆ ಇದೆ.ಹೊರಗಿನಿಂದ ಬಂದವರಿಂದಲೇ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಿದೆ.ಈ ಬಗ್ಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಪುನರುಚ್ಚರಿಸಿದರು.