ಜೀರೋ ಶಾಡೋ ಡೇ : ನಿಮಗೆ ಎಷ್ಟು ಗೊತ್ತು…?

ಬೆಂಗಳೂರು:

       ನಗರದಲ್ಲಿರುವ ಜನರು ಆಗಸ್ಟ್ 18ರಂದು ಮತ್ತೊಮ್ಮೆ ಶೂನ್ಯ ನೆರಳು ದಿನ ಕಣ್ತುಂಬಿಕೊಳ್ಳಲಿದ್ದಾರೆ. ಅಪರೂಪದ ಶೂನ್ಯ ನೆರಳು ದಿನಕ್ಕೆ ಬೆಂಗಳೂರಿಗರು ಈ ವರ್ಷ ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು. ಆ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡು ಬಂದಿರಲಿಲ್ಲ. ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ ನೆರಳಿನ ನಿಮಿಷವಾಗುತ್ತದೆ.

    ಈ ಕುರಿತು ಮಾಹಿತಿ ನೀಡಿರುವ ಜವಾಹರ್ ಲಾಲ್ ನೆಹರು ತಾರಾಲಯ ಯಾವುದೇ ವಸ್ತುಗಳನ್ನು 90 ಡಿಗ್ರಿಯಲ್ಲಿಟ್ಟಾಗ ಅದರ ನೆರಳು ಎರಡು ನಿಮಿಷದವರೆಗೆ ಕಾಣುವುದಿಲ್ಲ ಎಂದು ತಿಳಿಸಿದೆ. ಪ್ರತಿ ದಿನ ಸೂರ್ಯ ಮಧ್ಯಾಹ್ನ ನೆತ್ತಿ ಮೇಲೆ ಬರುತ್ತಾನೆ. ಆದರೆ Zero shadow day ದಿನದಂದು ಯಾವುದೇ ಲಂಬ ರೀತಿಯ ವಸ್ತು/ ವ್ಯಕ್ತಿಗಳ ನೆರಳು ಗೋಚರವಾಗದು.

     ಭೂಮಿ ಗೋಳಾಕಾರದಲ್ಲಿದ್ದು, ಸೂರ್ಯನ ಕಿರಣಗಳು ಮಧ್ಯಾಹ್ನ ಸಮಭಾಜಕದಲ್ಲಿ ಮಾತ್ರ ಬೀಳುತ್ತವೆ. ಈ ನೆರಳು ಉತ್ತರ/ದಕ್ಷಿಣ ದಿಕ್ಕಿಗೆ ಬೀಳುವುದಿಲ್ಲ. ಸೂರ್ಯನ ಪಥವು ಉತ್ತರದ ಚಲನೆಯಲ್ಲಿ 6 ತಿಂಗಳು ಉತ್ತರಾಭಿಮುಖವಾಗಿರುತ್ತದೆ. ದಕ್ಷಿಣದ ಚಲನೆಯಲ್ಲಿ 6 ತಿಂಗಳುಗಳು ದಕ್ಷಿಣಾಭಿಮುಖವಾಗಿರುತ್ತದೆ ಎಂದು ತಾರಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

    ಈ ಸಮಯದಲ್ಲಿ ಭೂಮಿಯ ಸುಮಾರು 23.5 ಡಿಗ್ರಿಗಳಷ್ಟು ಓರೆಯಾಗಿರುತ್ತದೆ. ಆದ್ದರಿಂದ ಸೂರ್ಯ ಮಧ್ಯಾಹ್ನದ ಸಮಯದಲ್ಲಿ ಸಮಭಾಜಕದ ಉತ್ತರ ಮತ್ತು ದಕ್ಷಿಣದ ಎಲ್ಲ ಡಿಗ್ರಿಗಳಲ್ಲಿ ನೇರವಾಗಿ ಮೇಲಕ್ಕೆ ಹೋಗುತ್ತಾನೆ. ಪ್ರತಿವರ್ಷ ಏಪ್ರಿಲ್, ಮೇ ಅಥವಾ ಆಗಸ್ಟ್ ನಲ್ಲಿ ಈ ಖಗೋಳ ವಿಸ್ಮಯದ ಚಮತ್ಕಾರ ನಡೆಯುತ್ತದೆ. ನಮ್ಮ ನೆರಳು ನಮಗೆ ಕಾಣದಂತೆ ಆಗುವುದನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link