ಇತಿಹಾಸದ ಪುಟ ಸೇರಲಿದೆ ಹಳೆ ಸಂಸತ್‌ ಭವನ….!

ನವದೆಹಲಿ

     ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಆರಂಭವಾಗುತ್ತಿದ್ದು, ಇದರ ನಡುವಲ್ಲೇ ಬ್ರಿಟೀಷರ ಆಳ್ವಿಕೆ, 2ನೇ ಮಹಾಯುದ್ಧ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಗಳಿಗೆ, ಸಂವಿಧಾನ ರಚನೆ ಹೀಗೆ ಹಲವಾರು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳಿಗೆ ಸಾಕ್ಷಿಯಾಗಿದ್ದ ನವದೆಹಲಿಯ ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭವಾಗಿದೆ.

     ಮೇ.28ರಂದು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದ ಹೊಸ ಸಂಸತ್ ಭವನಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಹೊಸ ಸಂಸತ್ತಿನಲ್ಲಿ 5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ.

    ನಿನ್ನೆಯಿಂದ ಸಂಸತ್ತಿನ ವಿಶೇಷ ಆರಂಭವಾಗಿದ್ದು, ಭಾರತದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣದ ಬಗ್ಗೆ ನಿನ್ನೆ ಹಳೇ ಸಂಸತ್ ಕಟ್ಟಡದಲ್ಲಿ ಚರ್ಚೆಗಳು ನಡೆದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವರು ಮಾತನಾಡಿದರು.

ನೂತನ ಸಂಸತ್‌ ನಲ್ಲಿ ಕೇಂದ್ರ ಮಂಡಿಸಲಿಚ್ಚಿಸಿರುವ ಮಸೂದೆಗಳು….! 
  • ವಕೀಲರ (ತಿದ್ದುಪಡಿ) ಮಸೂದೆ, 2023
  • ಪತ್ರಿಕಾ ಮತ್ತು ಆವರ್ತಕ ನೋಂದಣಿ ಮಸೂದೆ, 2023 ( ಇವುಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಗುವುದು ಆಗಸ್ಟ್ 3 ರಂದು ರಾಜ್ಯಸಭೆಯಲ್ಲಿ ಎರಡು ಮಸೂದೆ ಅಂಗೀಕರಿಸಲಾಯಿತು)
  • ಪೋಸ್ಟ್ ಆಫೀಸ್ ಬಿಲ್, 2023
  • ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅನ್ನು ರಾಜ್ಯಸಭೆಯಲ್ಲಿ ಚರ್ಚಿಸಲಾಗುವುದು (ಈ ಎರಡೂ ಮಸೂದೆಗಳನ್ನು ಆಗಸ್ಟ್ 10 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಯಿತು).
  • ಮೊದಲ ದಿನವಾದ ಇಂದು 75 ವರ್ಷಗಳ ಸಂಸದೀಯ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳ ಕುರಿತು ಚರ್ಚೆ ನಡೆಯಲಿದೆ. ಇದಲ್ಲದೆ, ಸ್ವಾತಂತ್ರ‍್ಯದ ಅಮರ ಅವಧಿಯ ಬಗ್ಗೆಯೂ ಚರ್ಚೆ ನಡೆಯಲಿದೆ. ಜೊತೆಗೆ ಚಂದ್ರಯಾನ-3 ಮಿಷನ್ ಮತ್ತು ಜಿ20 ಶೃಂಗಸಭೆಯಲ್ಲಿ ಪ್ರಸ್ತಾಪಗಳನ್ನು ತರಲಾಗುವುದು.
  • ಇವುಗಳ ನಡುವೆ ಸರ್ಕಾರ ಅಚ್ಚರಿಯ ರೀತಿಯಲ್ಲಿ ವಿಶೇಷ ಮಸೂದೆ ಮಂಡಿಸುವ ಸಾಧ್ಯತೆಗಳಿದೆ.

ಹಳೇ ಸಂಸತ್​​​ ಭವನದ ಮುಂದೆ ಸಂಸದರ ಫೋಟೋಶೂಟ್
ಇಂದಿನಿಂದ ಹಳೇ ಸಂಸತ್​ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಬೆಳಿಗ್ಗೆ 9.30ಕ್ಕೆ ಹಳೇ ಸಂಸತ್​​​ ಭವನದ ಮುಂದೆ ಸಂಸದರ ಫೋಟೋಶೂಟ್ ನಡೆಯಲಿದೆ. ಫೋಟೋಶೂಟ್​​ನಲ್ಲಿ ಸಂಸದರು ಭಾಗಿಯಾಗಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap