ರಾಮನಗರ:
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಆರೋಪ – ಪ್ರತ್ಯಾರೋಪದ ಜೊತೆಗೆ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಜೋರಾಗಿದೆ. ಕಮಿಷನ್ ಆರೋಪದ ಬೆನ್ನಲ್ಲೇ ಬಾಲಕೃಷ್ಣ ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿ ಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಮಾಜಿ ಶಾಸಕ ಬಾಲಕೃಷ್ಣ ಆರೋಪಕ್ಕೆ ಶಾಸಕ ಎ. ಮಂಜುನಾಥ್ ಪತ್ನಿ ಲಕ್ಷ್ಮಿ ಮಂಜುನಾಥ್ ಆಣೆ ಪ್ರಮಾಣದ ಮೂಲಕ ತಿರುಗೇಟು ನೀಡಿದ್ದಾರೆ.
ಗುತ್ತಿಗೆದಾರರ ಜೊತೆ ಹಾಲಿ ಶಾಸಕ ಎ.ಮಂಜುನಾಥ್ ಪತ್ನಿ ಪಾಲುದಾರಿಕೆ ಮಾಡಿದ್ದಾರೆ. ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುತ್ತಿದ್ದಾರೆ. ಕಾರ್ಯಕರ್ತನಿಗೂ ಒಂದು ಸಣ್ಣ ಸಹಾಯ ಮಾಡಿಲ್ಲ ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದರು. ನಾನು ಕಾರ್ಯಕರ್ತರಿಗೆ ಗುತ್ತಿಗೆ ನೀಡಿ ಕೆಲಸ ಮಾಡಿಸುತ್ತೇನೆ. ಆದರೆ ಅಮ್ಮವ್ರು ತಾ.ಪಂ ಸದಸ್ಯನಿಗೆ ಕಾಂಟ್ರಾಕ್ಟ್ ನೀಡಿ ಕಮಿಷನ್ ಪಡೆದಿದ್ದಾರೆ. ಇದ್ಯಾವುದು ನಿಮಗೆ ಗೊತ್ತಿಲ್ವಾ ಎಂದು ಟೀಕಿಸಿದರು. ಇದರಿಂದ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿ ಬಾಲಕೃಷ್ಣ ವಿರುದ್ಧ ಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ