ಮುಂಬೈ:
ತನ್ನ ಪಾಡಿಗೆ ತಾನು ಹೋಗ್ತಿದ್ದ ಬೈಕ್ ಸವಾರನಿಗೆ ನೀಲಗಾಯ್ ಓಡಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಅಲ್ಲೇ ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಇನಾಯತ್ ನಗರ ಠಾಣಾ ವ್ಯಾಪ್ತಿಯ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಜಯಿ ಪಾಠಕ್ ಗ್ರಾಮದ ಮುಕೇಶ್ ಪಾಂಡ್ಯ (28) ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರ ಪಾಂಡ್ಯ ಇನಾಯತ್ ನಗರ ಮಾರುಕಟ್ಟೆಗೆ ಬೈಕ್ನಲ್ಲಿ ಹೋಗುತ್ತಿದ್ದರು.
ಈ ವೇಳೆ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಡನ್ ಆಗಿ ನೀಲಗಾಯ್ ರಸ್ತೆ ದಾಟಲು ವೇಗವಾಗಿ ಓಡಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ.
ಇದರಿಂದ ಬೈಕ್ ಸವಾರ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಡಿಕ್ಕಿ ವೇಳೆ ನೀಲಗಾಯ್ ಪ್ರಾಣಿಯ ಕೊಂಬುಗಳು ಸವಾರನ ಎದೆಗೆ ಬಲವಾಗಿ ಚುಚ್ಚಿಕೊಂಡಿದ್ದರಿಂದ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ