ಮೂರು ದಿನಗಳ ಧಾರ್ಮಿಕಾ ಸಮಾರಂಭಕ್ಕೆ ತೆರೆ

ತುಮಕೂರು:

ನಗರದ ಅರಳೇಪೇಟೆ ಶ್ರೀಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭೀಷೇಕ ಸಮಾರಂಭದ ಅಂತಿಮ ದಿನವಾದ ಸೋಮವಾರ ಶ್ರೀ ಬಸವೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಮಹೋತ್ಸವವು ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮತ್ತು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಸಾನಿಧ್ಯದಲ್ಲಿ ವೈಭವವಾಗಿ ಜರುಗಿತು.

ನಂತರ ನಡೆದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಐದು ಶತಮಾನಗಳ ಇತಿಹಾಸವುಳ್ಳ ಬಸವೇಶ್ವರ ದೇವಾಲಯವನ್ನು ವೀರಶೈವ ಸಮಾಜದವರು ಜೀರ್ಣೋದ್ಧಾರ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಮೂಲ ಬಸವೇಶ್ವರ ದೇವರ ಜೊತೆಗೆ ಇತರೆ ವಿಗ್ರಹಗಳನ್ನು ಸ್ಥಾಪನೆ ಮಾಡಲಾಗಿದೆ ಧಾರ್ಮಿಕ ಆಚರಣೆಗೆ ಪುಣ್ಯ ಕ್ಷೇತ್ರವಾಗಿ ದೇವಾಲಯ ಸಂಕೀರ್ಣ ಕಂಗೊಳಿಸುತ್ತಿದೆ ಎಂದರು.

ತುಮಕೂರಿನಲ್ಲಿ ಅನೇಕ ಪವಿತ್ರವಾದ ದೇವಾಲಯಗಳಿವೆ ಶ್ರೀ ಸಿದ್ದಲಿಂಗೇಶ್ವರ ಸೇರಿದಂತೆ ಶಿವಕುಮಾರ ಮಹಾಸ್ವಾಮಿಗಳಂತ ಮಹಾ ಮಹಿಮರು ಈ ನೆಲೆದಲ್ಲಿ ನೆಲೆಸಿ ಹೋಗಿದ್ದಾರೆ ಅವರ ತಪಸ್ಸಿನ ಫಲವಾಗಿ ಜನ ಸಾಮಾನ್ಯರು ಸುಖವಾಗಿದ್ದಾರೆ ಎಂದು ಹೇಳಿದರು.

ಭಗವಂತ ಸರ್ವಾಂತರ್ಯಾಮಿ ಇತಿ ಮಿತಿಗಳಿಲ್ಲದವನೆ ಭಗವಂತ ಅಗಣ್ಯ, ಅಗೋಚರ, ಮನುಷ್ಯನಿಗೆವಿಶೇಷವಾದ ಆಲೋಚನಾ ಸ್ಥಾನಮಾನ ನೀಡಿ ಪಶು, ಪಕ್ಷಿ, ಪ್ರಾಣಿ ಸೃಷ್ಠಿಸಿದ್ದಾನೆ ಆದರೆ ಮನುಷ್ಯ ಭಗವಂತನ ಸೃಷ್ಠಿಗೆ ಪೂರಕವಾಗಿ ಅನೇಕ ಸೃಷ್ಠಿಗಳನ್ನೆ ಮಾಡುತ್ತಿದ್ದಾನೆ ಮಾನವ ಭಗವಂತನ ಹಿನ್ನಲೆಯನ್ನೆ ಹುಡುಕ ಹೊರಟ್ಟಿದ್ದಾನೆ ಇನ್ನೂ ಉತ್ತರ ಸಿಕ್ಕಿಲ್ಲ, ಭಗವಂತನಿಗೆ ರೂಪವಿಲ್ಲ ಆಕಾರವಿಲ್ಲ ಅವರವರ ಕಲ್ಪನೆಯಲ್ಲಿ ಭಗವಂತನಿದ್ದಾನೆ ಈ ರೀತಿಯಾಗಿ ದೇವಸ್ಥಾನಗಳು ಪ್ರಾಶಸ್ತ್ಯ ಪಡೆದುಕೊಂಡಿವೆ ಎಂದರು.

ಇಡೀ ಭರತಖಂಡದಲ್ಲಿ ಅನೇಕ ಪವಿತ್ರ ದೇವಾಲಯಗಳಿವೆ ದೇವಾಸ್ಥಾನಗಳೆಂದರ ಮನುಷ್ಯನಿಗೆ  ಪೂಜ್ಯ ಭಾವನೆಯಿಂದ ಶ್ರದ್ಧೆ, ಭಕ್ತಿ ತರ್ಪಣ ಮಾಡಲಿಕ್ಕೆ ಇರುವ ಪವಿತ್ರ ಕೇಂದ್ರ ದೇವಾಲಯ. ಇಲ್ಲಿ ಹೋದಾಗ ಮನಸ್ಸು ಪವಿತ್ರವಾಗುತ್ತದೆ, ಮನಸ್ಸಿನ ಪ್ರಪುಲ್ಲತೆಗೆ ದೇವಾಲಯಕ್ಕೆ ಹೋಗಬೇಕು. ತುಮಕೂರಿನ ಅರಳೇಪೇಟೆ ದೇವಾಲಯ ಕೂಡಾ ಹಾಗೇ ಇದೆ ಶಿಥಿಲಗೊಂಡ ದೇವಾಲಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಮೂರು ದಿನಗಳಿಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ನಡೆದಿವೆ ಇಲ್ಲಿನ ದೇವಾಲಯದ ಸಂಘದವರು ಉತ್ತಮ ಭಕ್ತಿಭಾವಗಳಿಂದ ದೇವಾಲಯ ನಿರ್ಮಾಣ ಮಾಡಿ ಪುನೀತರಾಗಿದ್ದಾರೆ ಎಂದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಅನೇಕ ಕಲಾ ಶಿಖರಗಳ ತಾಣ ತುಮಕೂರು, ಸುಮಾರು 5 ಶತಮಾನಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯದ ಪುರುತ್ಥಾನ ಮಾಡಿರುವುದು ಸಂತಸದ ವಿಷಯ ಎಂದರು.

ಸಾರ್ವಜನಿಕ ಬದುಕಿನಲ್ಲಿ ನಾವು ಮಾಡುವಂತಹ ಸೇವೆ ಇತಿಹಾಸದ ಒಂದು ಭಾಗವಾಗುತ್ತದೆ. ನಾವು ಕಟ್ಟುವ ಮನೆಯೊಳು ನಮ್ಮ ಮಕ್ಕಳಿಗೆ ಆಸ್ತಿಯ ಭಾಗವಾಗಬಹುದೇ ವಿನಃ ಇತಿಹಾಸದ ಭಾಗವಾಗಲಿಕ್ಕೆ ಸಾಧ್ಯವಿಲ್ಲ, ಇಂದು ಬಸವೇಶ್ವರ ದೇವಾಲಯ ನಿರ್ಮಾಣ ಮಾಡಿರುವುದು ಇತಿಹಾಸದಲ್ಲಿ ಉಳಿಯಲಿದೆ. ಯಾರು ಇತಿಹಾಸವನ್ನು ಓದುವುದಿಲ್ಲವೋ ಅವರು ಇತಿಹಾಸವನ್ನು ಸೃಷ್ಠಿಮಾಡಲು ಸಾಧ್ಯವಿಲ್ಲ, ಈ ದೇವಾಲಯಗಳನ್ನು ಯಾಕೆ ನಿರ್ಮಿಸಬೇಕು, ದೇವಾಲಯಗಳು ಶ್ರದ್ಧೆಯ ಕೇಂದ್ರ ನಿಷ್ಠೆಯ ಕೇಂದ್ರ, ಭಕ್ತಿಯ ಕೇಂದ್ರ, ನೆಮ್ಮದಿಯ ಕೇಂದ್ರ, ಪ್ರಾರ್ಥನೆಯ ಕೇಂದ್ರ, ಸರ್ವ ಸಮರ್ಪಣೆಯ ಕೇಂದ್ರ, ಪ್ರಾಯಶ್ಚಿತ್ಯ ಮಾಡಿಕೊಳ್ಳುವವರ ಕೇಂದ್ರ, ಎಲ್ಲಕ್ಕಿಂತ ಮಿಗಿಲಾಗಿ ಆತ್ಮಸಾಕ್ಷಿಯ ಜೊತೆಗೆ ಭಗವಂತನಲ್ಲಿ ಅನುಸಂಧಾನ ಮಾಡುವಂತಹ ಒಂದು ಪವಿತ್ರವಾದ ತಾಣ ದೇವಾಲಯ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್ ಮಾತನಾಡಿ, ಕಳೆದ ಮೂರು ದಿನಗಳಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ ವಿವಿಧ ಮಠಗಳ ಮಠಾಧೀಶರು, ಗಣ್ಯರು, ಭಕ್ತಾಧಿಗಳು ಭಾಗವಹಿಸಿ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನಕಪುರ ದೇಗುಲಮಠದ ಕಿರಿಯ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಅವರು ಶ್ರೀ ಬಸವೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಹುಲಿಯೂರು ದುರ್ಗ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ, ರಾಮೇನಹಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಜಯರಾಜೇಂದ್ರ ಸ್ವಾಮೀಜಿ, ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಸಿ.ವಿ.ಮಹದೇವಯ್ಯ, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ವೀರಶೈವ-ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‍ಪಟೇಲ್, ಟಿ.ಆರ್.ಸದಾಶಿವಯ್ಯ, ಶಿವಕುಮಾರ್, ಚಂದ್ರಶೇಖರ್, ರಾಜೇಂದ್ರ, ರಾಜೇಶ್, ಚಂದ್ರಶೇಖರ್, ರೇಣುಕಾರಾಧ್ಯ ಸೇರಿದಂತೆ ವೀರಶೈವ ಸಮಾಜದ ಎಲ್ಲಾ ನಿರ್ದೇಶಕರು, ಸದಸ್ಯರು, ವೀರಶೈವ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಖಂಡರು, ಗಣ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link