ತುಮಕೂರು
ಒಂದೇ ಸೂರಿನಡಿ ವಿವಿಧ ಕೌಂಟರ್ ತೆರೆದು ನಾಗರಿಕರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ
ಇಲ್ಲಿ ನ ಮಹಾನಗರ ಪಾಲಿಕೆ ಆವರಣದಲ್ಲಿ ಮಹಾನಗರ ಪಾಲಿಕೆ ಯಿಂದ ಇದೇ ಪ್ರಥಮ ಬಾರಿಗೆ ಆಯೋಜಿಸಿರುವ ತ್ವರಿತ ಸೇವೆ ಆಂದೋಲನಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೇಯರ್ ಪ್ರಭಾವ ತಿ ಉಪಮೇಯರ್ ನರಸಿಂಹಮೂರ್ತಿ, ಸದಸ್ಯರುಗಳು ಹಾಗೂ ಆಯುಕ್ತೆ ಬಿ. ವಿ. ಅಶ್ವಿಜ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಯಿಂದ ಆರಂಭಗೊಂಡ ಆಂದೋಲನದಲ್ಲಿ ಜನನ ಮರಣ ಪ್ರಮಾಣ ಪತ್ರ, ಖಾತೆ, ಕಂದಾಯ ವಿಳಾಸ, ವೋಟರ್ ಐಡಿ ತಿದ್ದುಪಡಿ,ಸೇರಿದಂತೆ ಪಾಲಿಕೆ ಯ ವಿವಿಧ ಸೇವೆ ಗಳಿಗೆ ಸಂಬಂಧಿಸಿದಂತೆ ಆರು ಕೌಂಟರ್ ಗಳನ್ನು ತೆರೆದು ಸಂಜೆ ಯವರಿಗೆ ಇತ್ಯರ್ಥ ಪಡಿಸಲು ಕ್ರಮ ವಹಿಸಲಾಗಿದೆ.
ನಾಗರಿಕರ ಸಮಸ್ಯೆ ಗಳನುಗುಣವಾಗಿ ಕೌಂಟರ್ ಗಳಿಗೆ ಟೋಕನ್ ಮೂಲಕ ಸರತಿ ಸಾಲಲ್ಲಿ ಕಳುಹಿಸಿ ಇತ್ಯರ್ಥ ಪಡಿಸುವ ಕಾರ್ಯಮಾಡಲಾಗುತ್ತಿದ್ದು ಒಂದೇ ಸೂರಿನಡಿ ಸಮಸ್ಯೆ ಇತ್ಯರ್ಥ ಕ್ಕೆ ಪಾಲಿಕೆ ವಹಿಸಿರುವ ಕ್ರಮಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೊಂದು ವಿನೂತನ ಅಭಿಯಾನ. ಪಾಲಿಕೆ ಇತಿಹಾಸ ದಲ್ಲೇ ಇದು ಮೊದಲ ಬಾರಿಗೆ ಆಯೋಜಿಸಿದ್ದು ತ್ಯಾಜ್ಯ ಸಂಗ್ರಹ ಣ ಆಟೋಗಳ ಮೂಲಕ ನಾಗರಿಕರ ಗಮನಕ್ಕೆ ತರಲಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯವರ್ತಿಗಳಿಗೆ ಆಸ್ಪದವಿಲ್ಲದೆ ಜನರೇ ಅರ್ಜಿಯೊಂದಿಗೆ ಬಂದು ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸದಾವಕಾಶ ವಾಗಿದ್ದು ಇನ್ನೂ ಮುಂದೆ ಪ್ರತಿ ತಿಂಗಳ ನಾಲ್ಕನೇ ಶುಕ್ರವಾರ ತ್ವರಿತ ಸೇವಾ ಆಂದೋಲನ ನಡೆಸಲಾಗುವುದು ಎಂದು ಮೇಯರ್ ಪ್ರಭಾವತಿ, ಆಯುಕ್ತೆ ಬಿ. ವಿ. ಅಶ್ವಿಜ ತಿಳಿಸಿದರು.ಕಂದಾಯ ಉಪ ಆಯುಕ್ತರಾದ ಸುಮತಿ, ಗಿರೀಶ್ ಕಾರ್ಯಪಾಲಕ ಅಭಿಯಂತರರಾದ ವಿನಯ್, ಆಶಾ ಸೇರಿದಂತೆ ಪಾಲಿಕೆ ಅಧಿಕಾರಿಗಳಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ