ಪಾಕಿಸ್ತಾನ ನಿರಾಶ್ರಿತೆಗೆ PAN ಕಾರ್ಡ್ : ಇದು ಹೇಗೆ ಸಾಧ್ಯ ಗೊತ್ತಾ…?

ನವದೆಹಲಿ: 

    ಗುಜರಾತ್ ನಲ್ಲಿ ವಾಸವಿರುವ ಪಾಕಿಸ್ತಾನ ನಿರಾಶ್ರಿತೆ PAN ಕಾರ್ಡ್ ನೀಡಲಾಗಿರುವ ಪ್ರಕರಣ ಪತ್ತೆಯಾಗಿದೆ. ಸಹರ್ನಗರದಲ್ಲಿ ವಾಸವಿರುವ ಪಾಕಿಸ್ತಾನ ಮೂಲದ ನಿರಾಶ್ರಿತರ ಕುಟುಂಬದ ಮಹಿಳೆಗೆ ಈ PAN ಕಾರ್ಡ್ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

   ಆರೋಗ್ಯ ಇಲಾಖೆಯ ತನಿಖೆಯಲ್ಲಿ ಈ ಪ್ರಕರಣ ಬಯಲಾಗಿದ್ದು, ಭೂರಿಬೆನ್ ಠಾಕೋರ್ (ಅಲಿಯಾಸ್ ಭೂರಿ ಶಾಂಡೋ). ಪಾಕ್ ನಿರಾಶ್ರಿತ ಕುಟುಂಬಕ್ಕೆ ಆಯುಷ್ಮಾನ್ ಕಾರ್ಡ್ ನೀಡಿರುವುದರ ಬಗ್ಗೆಯೂ ತನಿಖೆ ನಡೆಯಲಿದೆ. ದೀರ್ಘಾವಧಿ ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಪತ್ತೆಯಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯದ ಪುರಾವೆ ಮತ್ತು ಆಯುಷ್ಮಾನ್ ಕಾರ್ಡ್ ಜೊತೆಗೆ ಇದೀಗ ಪ್ಯಾನ್ ಕಾರ್ಡ್ ಸಮಸ್ಯೆ ತಲೆದೋರಿದೆ.

   ದೀರ್ಘಾವಧಿಯ ವೀಸಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಕುಟುಂಬವು 2021 ರಲ್ಲಿ ಪಡಿತರ ಚೀಟಿಯನ್ನು ಹೊಂದಿತ್ತು ಎಂದು ಆರೋಗ್ಯ ಇಲಾಖೆಯ ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ತಾನಿ ನಿರಾಶ್ರಿತರ ಹೆಸರಿನಲ್ಲಿ ಪ್ಯಾನ್ ಕಾರ್ಡ್ ನೀಡಿರುವುದು ಸಹ ಪತ್ತೆಯಾಗಿದೆ. ಮೆಹಸಾನ ಮಮ್ಮಲದಾರ ಕಛೇರಿಯು ಕುಟುಂಬಕ್ಕೆ ಪಡಿತರ ಚೀಟಿಯನ್ನು ನೀಡಿದ್ದು, ಅದರ ಆಧಾರದ ಮೇಲೆ ಮೆಹಸಾನ ತಾಲೂಕಾ ಅಭಿವೃದ್ದಿ ಅಧಿಕಾರಿಯ ಕಛೇರಿಯು ಆದಾಯ ವಿವರವನ್ನು ನೀಡಿದೆ. ಆದರೆ, ಎರಡು ವರ್ಷಗಳ ಹಿಂದೆ ಚುನಾವಣಾ ಕಾರ್ಡ್‌ನ ಸಮಸ್ಯೆ ಕಾಣಿಸಿಕೊಂಡಾಗ ಪಾಕಿಸ್ತಾನಿ ಕುಟುಂಬವು ಪಡಿತರ ಚೀಟಿಯನ್ನು ಒಪ್ಪಿಸಿತು.

   “ಪಾಕಿಸ್ತಾನದ ಈ ಪ್ರಜೆಯು ಆದಾಯದ ವಿವರವನ್ನು ಬಳಸಿಕೊಂಡು ಪ್ಯಾನ್ ಕಾರ್ಡ್ ಪಡೆದಿರಬಹುದು, ಒಬ್ಬ ವ್ಯಕ್ತಿಯು ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಆದಾಯದ ವಿವರವನ್ನು ಹೊಂದಿದ್ದರೆ, ಪಾನ್ ಕಾರ್ಡ್ ಪಡೆಯುವುದು ಕಷ್ಟವೇನಲ್ಲ, ಈ ಆಧಾರದ ಮೇಲೆ ಮಹಿಳೆಯೂ ಸಹ ಪ್ಯಾನ್ ಕಾರ್ಡ್ ಪಡೆದುಕೊಂಡಿರಬಹುದು” ಎಂದು ಮೂಲವೊಂದು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap