ವೇತನ ಕಡಿತ : T20 ಸರಣಿಯಿಂದ ಹಿಂದೆ ಸರಿದ ಪಾಕ್‌ ಆಟಗಾರರು ….!

ಪಾಕಿಸ್ತಾನ :

    ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್ ಹಾಗೂ ನಸೀಮ್ ಶಾ ಮುಂಬರುವ ನ್ಯಾಷನಲ್​ ಟಿ20 ಚಾಂಪಿಯನ್​ಶಿಪ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪಾಕಿಸ್ತಾನದ ದೇಶೀಯ ಟಿ20 ಟೂರ್ನಿಯಾಗಿರುವ ಈ ಪಂದ್ಯಾವಳಿಯಿಂದ ಪ್ರಮುಖ ಆಟಗಾರರು ಹೊರಗುಳಿಯಲು ಮುಖ್ಯ ಕಾರಣ ವೇತನ ಕಡಿತ ಎಂದು ತಿಳಿದು ಬಂದಿದೆ.

     ನ್ಯೂಝಿಲೆಂಡ್‌ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಿಂದ ಈ ಮೂವರನ್ನು ಕೈ ಬಿಡಲಾಗಿತ್ತು. ಹೀಗಾಗಿ ಬಾಬರ್, ರಿಝ್ವಾನ್ ಹಾಗೂ ನಸೀಮ್ ಶಾ ದೇಶೀಯ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು.

   ಆದರೀಗ ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ಈ ಮೂವರು ಆಟಗಾರರು ನ್ಯಾಷನಲ್​ ಟಿ20 ಚಾಂಪಿಯನ್​ಶಿಪ್ ಆಡಲು ಹಿಂದೇಟು ಹಾಕಿರುವುದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಚಿಂತೆ ಹೆಚ್ಚಿಸಿದೆ.ಇನ್ನು ಈ ಬಾರಿಯ ನ್ಯಾಷನಲ್ ಟಿ20 ಚಾಂಪಿಯನ್​ಶಿಪ್ ಟೂರ್ನಿಯು ಫೈಸಲಾಬಾದ್, ಲಾಹೋರ್ ಮತ್ತು ಮುಲ್ತಾನ್ ನಗರಗಳಲ್ಲಿ ನಡೆಯಲಿದ್ದು, ಒಟ್ಟು 39 ಪಂದ್ಯಗಳನ್ನು ಆಡಲಾಗುತ್ತದೆ. ಅಲ್ಲದೆ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 27 ರಂದು ಫೈಸಲಾಬಾದ್‌ನಲ್ಲಿ ನಡೆಯಲಿದೆ. 

   ಇತ್ತ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಆಟಗಾರರ ವೇತನ ಕಡಿತಗೊಳಿಸಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ, ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ತಂಡದ ಆಟಗಾರರ ವೇತನಕ್ಕೂ ಕತ್ತರಿ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Recent Articles

spot_img

Related Stories

Share via
Copy link