ಪರಮೇಶ್ವರ್ ಗೆ ಮಕ್ಕಳ ಹಕ್ಕುಗಳ ವೀಕ್ಷಣಾಲಯದಿಂದ ಪತ್ರ!

ಬೆಂಗಳೂರು:

     ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯ ಆಂಜನೇಯ ಬೆಟ್ಟದ ತಪ್ಪಲಿನಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾಗ ಕಸದ ರಾಶಿಯಲ್ಲಿದ್ದ ನಾಡ ಬಾಂಬ್ ಸ್ಫೋಟಗೊಂಡು ಮಾದಿಹಳ್ಳಿಯ ಜೈನ ಮಠಕ್ಕೆ ಸೇರಿದ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಂತರ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಮಕ್ಕಳ ಹಕ್ಕುಗಳ ವೀಕ್ಷಣಾಲಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದೆ.

     ಘಟನೆ ಹೇಗೆ ಸಂಭವಿಸಿತು ಮತ್ತು ಅದಕ್ಕೆ ಯಾರು ಕಾರಣರು ಎಂಬುದನ್ನು ತಿಳಿಯಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ವಿಸ್ತೃತ ತನಿಖೆ ನಡೆಸಬೇಕು. ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ತಕ್ಷಣದ ಆರ್ಥಿಕ ನೆರವು ನೀಡಬೇಕು. ಅವರು ಯಾವುದೇ ತೊಂದರೆಯಿಲ್ಲದೆ ಪರೀಕ್ಷೆ ಬರೆಯುವಂತಾಗಬೇಕು ಎಂದು ಅಸೋಸಿಯೇಷನ್ ಒತ್ತಾಯಿಸಿದೆ.

    ಘಟನೆಯು ಮಕ್ಕಳ ಸುರಕ್ಷತೆ ಖಾತ್ರಿಪಡಿಸುವಲ್ಲಿ ಪ್ರಮುಖ ವೈಫಲ್ಯಗಳನ್ನು ತೋರಿಸುತ್ತದೆ. ಸರಿಯಾದ ಮುನ್ನೆಚ್ಚರಿಕೆಗಳಿಲ್ಲದೆ ವಿದ್ಯಾರ್ಥಿಗಳನ್ನು ದೂರದ ಮತ್ತು ಅಪಾಯಕಾರಿ ಸ್ಥಳಕ್ಕೆ ಏಕೆ ಕಳುಹಿಸಲಾಗಿತ್ತು ಎಂದು ಪ್ರಶ್ನಿಸಿದೆ.  ಜವಾಬ್ದಾರಿಯಾಗಿದೆ. ಆದರೂ, ವಿದ್ಯಾರ್ಥಿಗಳನ್ನು ಸ್ವಚ್ಛತಾ ಕಾರ್ಯಕ್ಕಾಗಿ ಕಾಡು ಪ್ರಾಣಿಗಳಿರುವ ದುರ್ಗಮ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಶಾಲೆಯು ಅಂತಹ ಸ್ಥಳವನ್ನು ಏಕೆ ಆಯ್ಕೆ ಮಾಡಿತ್ತು. ಸರಿಯಾದ ಅನುಮತಿ ಪಡೆಯಲಾಗಿದೆಯೇ ಮತ್ತು ಮಕ್ಕಳನ್ನು ಅಲ್ಲಿಗೆ ಕಳುಹಿಸುವ ಮೊದಲು ಸುರಕ್ಷತೆಗಾಗಿ ಪ್ರದೇಶವನ್ನು ಪರಿಶೀಲಿಸಲಾಗಿದೆಯೇ, ಪೋಷಕರ ಒಪ್ಪಿಗೆ ತೆಗೆದುಕೊಳ್ಳಲಾಗಿದೆಯೇ ಎಂದು ಕೆಸಿಆರ್ ಒ ಕೇಳಿದೆ. 

    ಅಂತಹ ಪ್ರದೇಶಗಳು ಅಪಾಯದಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಸ್ಥಳೀಯ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೂ, ವಿದ್ಯಾರ್ಥಿಗಳನ್ನು ಸ್ವಚ್ಛತಾ ಕಾರ್ಯಕ್ಕಾಗಿ ಕಾಡು ಪ್ರಾಣಿಗಳಿರುವ ದುರ್ಗಮ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಶಾಲೆಯು ಅಂತಹ ಸ್ಥಳವನ್ನು ಏಕೆ ಆಯ್ಕೆ ಮಾಡಿತ್ತು. ಸರಿಯಾದ ಅನುಮತಿ ಪಡೆಯಲಾಗಿದೆಯೇ ಮತ್ತು ಮಕ್ಕಳನ್ನು ಅಲ್ಲಿಗೆ ಕಳುಹಿಸುವ ಮೊದಲು ಸುರಕ್ಷತೆಗಾಗಿ ಪ್ರದೇಶವನ್ನು ಪರಿಶೀಲಿಸಲಾಗಿದೆಯೇ, ಪೋಷಕರ ಒಪ್ಪಿಗೆ ತೆಗೆದುಕೊಳ್ಳಲಾಗಿದೆಯೇ ಎಂದು ಕೆಸಿಆರ್ ಒ ಕೇಳಿದೆ.

Recent Articles

spot_img

Related Stories

Share via
Copy link