ಆಗ್ರಾ(ಉತ್ತರ ಪ್ರದೇಶ):
ತಾಜ್ ಮಹಲ್ ಬಳಿ ಅತಿ ವೇಗದ ವಿಮಾನ ಹಾದು ಹೋಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಪ್ರವಾಸಿಗರು ವಿಮಾನ ಸಮೀಪಿಸುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ವಿಮಾನವು ತಾಜ್ ಮಹಲ್‌ನ ಗೋಪುರದ ಬಳಿ ಹಾದು ಸ್ಮಶಾನದ ಕಡೆಗೆ ತಿರುಗಿತು ಎಂದು ಹೇಳಲಾಗುತ್ತಿದೆ.
ತಾಜ್ ಮಹಲ್ ಬಳಿ ವಿಮಾನ ಹಾದು ಹೋಗಿದ್ದು, ಆತಂಕ ಸೃಷ್ಟಿಯಾಗಿದೆ. ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಪ್ರವಾಸಿಗರು ವಿಮಾನ ಸಮೀಪಿಸುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ.
ವಿಮಾನವು ತಾಜ್ ಮಹಲ್‌ನ ಗೋಪುರದ ಬಳಿ ಹಾದು ಹೋಗಿದೆ. ಈ ಬಗ್ಗೆ ಸಿಐಎಸ್‌ಎಫ್‌ನ ಹಿರಿಯ ಸಂರಕ್ಷಣಾ ಸಹಾಯಕ ರಾಜಕುಮಾರ ವಾಜಪೇಯಿ ಅವರು ಪ್ರತಿಕ್ರಿಯಿಸಿದ್ದು, ಈ ವಿಷಯ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಆ ರೀತಿ ನಡೆದಿದ್ದರೆ ನಾವು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ತಾಜ್ಮಹಲ್ ಬಳಿ ಹಾದುಹೋದ ವಿಮಾನ
ತಾಜ್ ಮಹಲ್‌ನ ಭದ್ರತೆಯನ್ನು ನಿರ್ವಹಿಸುತ್ತಿರುವ ಸಿಐಎಸ್‌ಎಫ್‌ನ ಕಂಪನಿ ಕಮಾಂಡೆಂಟ್ ರಾಹುಲ್ ಯಾದವ್ ಸಹ ಇದೇ ರೀತಿ ಹೇಳಿದ್ದಾರೆ. ಆದರೆ ಪ್ರವಾಸಿಗರಲ್ಲಿ ಈ ಘಟನೆ ಭಯ ಹುಟ್ಟಿಸಿದೆ. ಜೊತೆಗೆ ತಾಜ್ ಮಹಲ್ ಭದ್ರತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ತಾಜ್ ಮಹಲ್ ಸುತ್ತಲೂ ಯಾವುದೇ ಫ್ಲೈ ಝೋನ್ ಇಲ್ಲ. ಹಾಗೆ ಡ್ರೋನ್‌ಗಳನ್ನು ಹಾರಿಸುವುದನ್ನು ಸಹ ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಾಜ್ ಮಹಲ್ ಬಳಿ ವಿಮಾನ ಹಾದು ಹೋಗಿರುವುದು ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.