ರಾಜ್ಯದಲ್ಲೇ ಮೊದಲ ಬಾರಿಗೆ ಪಾವಗಡದಲ್ಲಿ ಸಾವಯವ ಸ್ಯಾನಿಟೈಸಿಂಗ್‍!!

 ಪಾವಗಡ  : 

     ಇಡೀ ರಾಜ್ಯದಲ್ಲಿಯೆ ಮೊದಲನೆ ಬಾರಿಗೆ ಪಾವಗಡ ತಾಲ್ಲೂಕಿನಾದ್ಯಂತ ಸಾವಯವ ಸ್ಯಾನಿಟೈಸಿಂಗ್ ಮಾಡುವ ಮೂಲಕ ಕೊರೋನಾ ಸೋಂಕು ಹರಡದಂತೆ ನಿಯಂತ್ರಿಸಲು ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ಮುಂದಾಗಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಬಿ.ಕೆ. ಮುನಿಸ್ವಾಮಿ ತಿಳಿಸಿದ್ದಾರೆ.

ಅವರು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ಹಾಗೂ ಸುಗುರಾಧನಾ ಮತ್ತು ದಕ್ಷ ಕಂಪನಿ ಚೆನ್ನೈ ಇವರ ಸಹಯೋಗದಲ್ಲಿ ಆಯುಷ್ ಇಲಾಖೆಯಿಂದ ದೃಢೀಕರಿಸಿದ ವೈರಾಣು ನಿವಾರಕ ಸಾವಯವ ದ್ರಾವಣವನ್ನು ಪಾವಗಡ ಪಟ್ಟಣವೂ ಸೇರಿದಂತೆ 252 ಹಳ್ಳಿಗಳಿಗೆ ಡ್ರೋಣ್ ಮತ್ತು ಬ್ಲೋಯರ್ ಮೂಲಕ ಸಿಂಪಡಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿಯೆ ಇದೇ ಮೊದಲ ಬಾರಿಗೆ ಟ್ರಸ್ಟ್ ವತಿಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಾವಯವ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ. ಇದಕ್ಕೆ ತಾಲ್ಲೂಕು ಆಡಳಿತ ಸಂಪೂರ್ಣ ಬೆಂಬಲ ನೀಡಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲೂ ಸ್ಯಾನಿಟೈಸಿಂಗ್ ಮಾಡಲಾಗುವುದು ಎಂದು ತಿಳಿಸಿದರು.

      ಸುಗುರಾಧನಾ ಚೆನ್ನೈನ ಸಿಇಓ ಕಾರ್ತಿಕ್‍ನಾರಾಯಣ್ ಮಾತನಾಡಿ, ಈಗಾಗಲೆ ತಮಿಳು ನಾಡಿನಲ್ಲಿ ಸಾವಯವ ದ್ರಾವಣವನ್ನು ಸಿಂಪಡಣೆಯಿಂದಾಗಿ ಶೇ. 40 ರಷ್ಟು ಕೋವಿಡ್ ರೋಗಾಣು ಹರಡುವುದು ನಿಯಂತ್ರಣವಾಗಿದೆ. ಪಾವಗಡ ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಈ ದ್ರಾವಣವನ್ನು ಸಿಂಪಡಿಸಲಾಗುವುದು. ಸ್ಥಳದ ಅಭಾವ ಇರುವ ಕಡೆ ಡ್ರೋಣ್ ಮೂಲಕ ಮತ್ತು ರಸ್ತೆಗಳಲ್ಲಿ ಬ್ಲೋಯರ್ ಮೂಲಕ ಸಿಂಪಡಿಸಲಾಗುವುದು ಎಂದರು.

      ತಹಸೀಲ್ದಾರ್ ಕೆ. ಆರ್. ನಾಗರಾಜ್ ಮಾತನಾಡಿ, ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ಸರ್ಕಾರಿ ಅಸ್ಪತ್ರೆಗೆ 33 ಜಂಬೊ ಆ್ಯಕ್ಸಿಜನ್ ಸಿಲಿಂಡರ್, ಮಂಚ ಮತ್ತು ಹಾಸಿಗೆ ದಾನ ನೀಡಲಾಗಿದೆ. ಇದೀಗ ತಾಲ್ಲೂಕಿನಲ್ಲಿ ಕೋವಿಡ್ ಸೋಂಕು ಮೀತಿ ಮೀರಿ ಹರಡುವುದನ್ನು ಕಟ್ಟಿ ಹಾಕಲು ಸಾವಯವ ದ್ರಾವಣವನ್ನು ಸಿಂಪಡಿಸುತ್ತಿರುವುದು ಅಭಿನಂದನಾರ್ಹ ಎಂದರು.

ತಾಪಂ ಈಓ ಶಿವರಾಜಯ್ಯ ಮಾತನಾಡಿ, ಸಮಗ್ರ ಸೇವಾಭಿವೃದ್ದಿ ಟ್ರಸ್ಟ್‍ನ ಈ ಕಾರ್ಯಕ್ಕೆ ತಾಲ್ಲೂಕಿನ 34 ಗ್ರಾಪಂಗಳ ಪಿಡಿಓ ಮತ್ತು ಕಾಯದರ್ಶಿಗಳು ಹಾಗೂ ಸಿಬ್ಬಂದಿ ಜೊತೆ ಇದ್ದು, ದ್ರಾವಣವನ್ನು ಸಿಂಪಡಿಸುವ ಕಾರ್ಯಕ್ಕೆ ಕೈ ಜೋಡಿಸಲಾಗುವುದು ಎಂದರು.
ಮುಖ್ಯಾಧಿಕಾರಿ ಬಿ.ಸಿ. ಅರ್ಚನಾ ಮಾತನಾಡಿ, ರಾಸಾಯನಿಕ ರೋಗ ನಿರೋಧಕಗಳನ್ನು ಬಳಸುವುದರಿಂದ ಮನುಷ್ಯನಿಗೆ ಹಾನಿ ಇರುತ್ತದೆ. ಆದರೆ ಸಾವಯವ ದ್ರಾವಣದಿಂದ ಕೋವಿಡ್-19 ವೈರಸ್‍ನ್ನು ನಿಯಂತ್ರಿಸಬಹುದಾಗಿದೆ. ಮನುಷ್ಯನಿಗೆ ಉಪಯೋಗವಾಗುವ ಈ ದ್ರಾವಣವನ್ನು ಎಲ್ಲ ಕಡೆ ಉಪಯೋಗಿಸಿದರೆ ಪ್ರಕೃತಿಯನ್ನು ಉಳಿಸಿ, ಕೋವಿಡ್ ರೋಗಾಣುವನ್ನು ತಡೆಯಬಹುದು ಎಂದು ಹೇಳಿದರು.
ಮಂಗಳವಾರ ಕಸಬಾ ಹೋಬಳಿಯ ಎಲ್ಲಾ ಗ್ರಾಮಗಳಲ್ಲೂ ಸ್ಯಾನಿಟೈಸಿಂಗ್ ಮಾಡಲಾಯಿತು.

     ಈ ವೇಳೆ ಟ್ರಸ್ಟ್‍ನ ನಿರ್ದೇಶಕ ಗುಮ್ಮಗಟ್ಟ ಮಲ್ಲೇಶ್, ಬಜ್ಜಪ್ಪ, ಶ್ರೀಧರ್ ಗುಪ್ತ, ಮದ್ದೆ ನರಸೇಗೌಡ, ಶಶಾಂಕ್, ಸುಭಾಶ್ ಪಾಳೇಗಾರ್, ಕೋಣನಕುರಿಕೆ ರವಿಕುಮಾರ್, ಕೆ.ಟಿ.ಹಳ್ಳಿಚಂದ್ರು, ಉಮೇಶ್, ಆಂಜನೇಯಲು, ಹನುಮಂತರೆಡ್ಡಿ, ಹರಿನಾಥ್, ನಟಶೇಖರ್, ಶ್ರೀನಿವಾಸ್, ನಮ್ಮಹಕ್ಕು ಗಿರಿ, ವಿಶ್ವನಾಥ್, ಮತ್ತು ಸುಗುರಾಧನಾ ಹಾಗೂ ದಕ್ಷ ಕಂಪನಿಯ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap