ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಆಸ್ತಿ ಎಷ್ಟು ಗೊತ್ತಾ….?

ವಿಜಯವಾಡ: 

    ಜನಸೇನಾ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್ ಅವರ ಕುಟುಂಬವು 164.53 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದೆ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವರ ಆದಾಯ ಸುಮಾರು 60 ಕೋಟಿ ರೂ. ಹೆಚ್ಚಾಗಿದೆ.

    ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಪವನ್ ಕಲ್ಯಾಣ್ 65.77 ಕೋಟಿ ರೂ.ಗಳಷ್ಟು ಹೊಣೆಗಾರಿಕೆ ಹೊಂದಿದ್ದಾರೆ. ನಾಲ್ವರು ಮಕ್ಕಳು ಒಳಗೊಂಡಂತೆ ಅವರ ಕುಟುಂಬವು 46.17 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ ಮತ್ತು 118.36 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದೆ. 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ 1.10 ಕೋಟಿ ರೂಪಾಯಿ ನಷ್ಟವನ್ನು ತೋರಿಸಿದ್ದರು.

     ಆಂಧ್ರಪ್ರದೇಶದ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎ ಮೈತ್ರಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ಅಸೆಂಬ್ಲಿ ಮತ್ತು 17 ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಬಿಜೆಪಿ ಆರು ಲೋಕಸಭೆ ಮತ್ತು 10 ವಿಧಾನಸಭೆ ಸ್ಥಾನಗಳನ್ನು ಸ್ಪರ್ಧಿಸಲಿದೆ. ಜನಸೇನಾ ಎರಡು ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ.

    ಜನಸೇನಾ ಮುಖ್ಯಸ್ಥಾಗಿರುವ ಪವನ್ ಕಲ್ಯಾಣ್ ಹರ್ಲಿ ಡೇವಿಡ್ಸನ್ ಬೈಕ್ ಮತ್ತು ರೇಂಜ್ ರೋವರ್ ಸೇರಿದಂತೆ 11 ವಾಹನಗಳನ್ನು ಹೊಂದಿದ್ದಾರೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap