ಧರ್ಮಸ್ಥಳ :
ಧರ್ಮಸ್ಥಳದ ಬಗ್ಗೆ ಬುರುಡೆ ಗ್ಯಾಂಗ್ನಿಂದ ಷಡ್ಯಂತ್ರ ಹಾಗೂ ಅಪಪ್ರಚಾರ ಖಂಡಿಸಿ ವಿವಿಧ ಪಕ್ಷಗಳಿಂದ ಧರ್ಮಸ್ಥಳ ಚಲೋ ಬೆನ್ನಲ್ಲೇ ಇದೀಗ ಧರ್ಮಸ್ಥಳದ ಪರ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಿಂತಿದ್ದಾರೆ. ಡಿಸಿಎಂ, ನಟ ಪವನ್ ಕಲ್ಯಾಣ್ ಅವರು ಸೆಪ್ಟೆಂಬರ್ 11ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಕ್ಷೇತ್ರದ ವಿರುದ್ಧ ಅಪಪ್ರಚಾರದ ನಿವಾರಣೆಗಾಗಿ ಪೂಜೆ ಸಲ್ಲಿಸಲಿದ್ದಾರೆ.
ಧರ್ಮಸ್ಥಳದ ಬಗ್ಗೆ ಕೇಳಿಬರುತ್ತಿರುವ ಅಪಪ್ರಚಾರ ಖಂಡಿಸಿ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿರುವ ಪವನ್, ಹೆಗ್ಗಡೆಯವರನ್ನೂ ಭೇಟಿ ಮಾಡಲಿದ್ದಾರೆ. ಪವನ್ ಕಲ್ಯಾಣ್ ಹಾಗೂ ಅವರನ್ನೊಳಗೊಂಡ ತಂಡ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಆರತಿ ಪೂಜೆ ನೆರವೇರಿಸಲಿದೆ. ಕೆಲವು ದಿನಗಳ ಮೊದಲು ಅವರು ತಮ್ಮ ಭೇಟಿಯ ಬಗ್ಗೆ ತಿಳಿಸಿದ್ದರು. ಕ್ಷೇತ್ರದ ಮೇಲೆ ಅಪಪ್ರಚಾರ ಖಂಡಿಸಿ ಬಿಜೆಪಿ ಈಗಾಗಲೇ ಧರ್ಮಸ್ಥಳ ಚಲೋ ಅಭಿಯಾನ ನಡೆಸಿದೆ. ಕಾಂಗ್ರೆಸ್ನ ಕೆಲವು ನಾಯಕರು ಸಹ ವೈಯಕ್ತಿಕವಾಗಿ ಧರ್ಮಸ್ಥಳ ಯಾತ್ರ ಕೈಗೊಂಡು ಹೆಗ್ಡೆಯವರಿಗೆ ಬೆಂಬಲ ಸೂಚಿಸಿದ್ದಾರೆ.