ಪೀಣ್ಯ ಕೈಗಾರಿಕಾ ಪ್ರದೇಶ : ಮೂಲಸೌಕರ್ಯ ಇಲ್ಲದ ಕಾರಣ ಶೇ 30 ರಷ್ಟು ಆರ್ಥಿಕ ಕುಸಿತ…..!

ಬೆಂಗಳೂರು

   ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಶೇ 30 ರಷ್ಟು ಆರ್ಥಿಕ ಕುಸಿತ ಕಂಡು ಬಂದಿದೆ ಎನ್ನಲಾಗಿದೆ. ಒಂದು ಕಾಲದಲ್ಲಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ಇದೀಗ ಯಾರಿಗೂ ಬೇಡವಾಗಿದೆ! ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ಇದರ ಪರಿಣಾಮವಾಗಿ ಹೂಡಿಕೆದಾರರು ಬರದೆ ಕೈಗಾರಿಕೆಗಳಿಗೆ ಆರ್ಥಿಕ ನಷ್ಟ ಎದುರಾದೆ ಎಂದು ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಬೇಸರ ಹೊರ ಹಾಕಿದೆ.

 
    ಆದರೆ, ಸರ್ಕಾರದಿಂದ ಸಮರ್ಪಕವಾದ ರಸ್ತೆ ಭಾಗ್ಯ ಇಲ್ಲದಿರುವುದು, ಅಭಿವೃದ್ಧಿ ಮಾಡದಿರುವುದು ವಿದೇಶಿ ಹೂಡಿಕೆದಾರರ ಆಕರ್ಷಣೆ ಕಳೆದುಕೊಳ್ಳಲು ಕಾರಣವಾಗಿದೆ. ಇದರಿಂದಾಗಿ ಅಂತಾ ಸಣ್ಣ ಕೈಗಾರಿಗಳ ಮಾಲೀಕರು ಪರದಾಡುವಂತಾಗಿದೆ.ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು 16 ಸಾವಿರ ಕೈಗಾರಿಕಾ ಘಟಕಗಳಿವೆ. ಮೊದಲೆಲ್ಲಾ ವಿದೇಶಿ ಗ್ರಾಹಕರು ಇಲ್ಲಿಗೆ ಹೆಚ್ಚಾಗಿದ್ದರು. ಆದರೆ, ಈಗ ಇಲ್ಲಿ ರಸ್ತೆ ಸರಿ ಇಲ್ಲದೆ ಇರುವ ಕಾರಣದಿಂದ ಗ್ರಾಹಕರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಸರಿಯಿಲ್ಲ, ಗುಂಡಿ, ಒಳಚಂಡಿ ವ್ಯವಸ್ಥೆ ಇಲ್ಲ. ಮಳೆ ಬಂದಾಗ ನೀರು ತುಂಬಿಕೊಂಡು ಇಂಡಸ್ಟ್ರಿಯ ರಸ್ತೆಗಳು, ಮೂಲಭೂತ ಸೌಕರ್ಯ ಇಲ್ಲದೆ ಇಂಡಸ್ಟ್ರಿಯತ್ತ ಗ್ರಾಹಕರು ಬರುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ.
   ISRO, HAL, DRDO ಗೆ ಬೇಕಾದ ವಸ್ತುಗಳನ್ನು ಪೂರೈಸುತ್ತಿದ್ದ ಪೀಣ್ಯ ಇಂಡಸ್ಟ್ರಿ‌ ಈಗ ಧೂಳು ಹಿಡಿಯುತ್ತಿದೆ. ಹೀಗಾಗಿ ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಕುಮಾರ್, ಮೂಲಭೂತ ಸೌಕರ್ಯಕ್ಕೆ ಒದಗಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಪೀಣ್ಯ ಇಂಡಸ್ಟ್ರಿ ಇದೀಗ ಮೂಲಸೌಕರ್ಯಗಳಿಲ್ಲದೆ, ಬ್ರ್ಯಾಂಡ್ ಕಳೆದುಕೊಳ್ಳುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

Recent Articles

spot_img

Related Stories

Share via
Copy link