ಪಿಂಕ್‌ ಟಾಯ್ಲೆಟ್‌ :ಏನಿದು…..ಎಲ್ಲಿದೆ ಗೊತ್ತ….?

ಮಂಗಳೂರು

      ಬಂಟ್ವಾಳ ಮಿನಿವಿಧಾನಸೌಧ ಸನಿಹದಲ್ಲೇ ಈ ಪಿಂಕ್ ಟಾಯ್ಲೆಟ್ ನಿರ್ಮಾಣವಾಗುತ್ತಿದೆ. ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪರಿಕಲ್ಪನೆಯಲ್ಲಿ ಪಿಂಕ್ ಟಾಯ್ಲೆಟ್ ತಲೆಯೆತ್ತುತ್ತಿದೆ.

      ಮಹಿಳೆಯರಿಗೆಂದೇ ಈ ವಿಶೇಷ ಶೌಚಾಲಯವನ್ನು ನಿರ್ಮಿಸಲಾಗಿದೆ. ಶೌಚಾಲಯ ಮಾತ್ರವಲ್ಲದೆ ಇದರೊಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯನ್ನೂ ನಿರ್ಮಿಸಲಾಗಿದೆ. ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಹಾಲುಣಿಸುವುಕ್ಕೆ ಇಲ್ಲಿ ಪ್ರತ್ಯೇಕ ಫೀಡಿಂಗ್ ಏರಿಯಾ ನಿರ್ಮಿಸಲಾಗಿದೆ. ಇಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

      ಶೌಚಾಲಯದ ಪಕ್ಕದಲ್ಲೇ ತಾಲೂಕು ಕಚೇರಿ, ನ್ಯಾಯಾಲಯ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು ಇರುವುದರಿಂದ ಅಲ್ಲಿಗೆ ಆಗಮಿಸಿದ ಮಹಿಳೆಯರಿಗೆ ಈ ವ್ಯವಸ್ಥೆ ಅನುಕೂಲವಾಗಲಿದೆ. ವಿಶ್ರಾಂತಿ ಕೊಠಡಿಗೆ ಎಸಿ ಅಳವಡಿಸಲಾಗಿದೆ. ತೊಟ್ಟಿಲು ಅಳವಡಿಸುವ ಚಿಂತನೆಯೂ ಇದೆ. ಈ ಮೂಲಕ ಮಹಿಳೆಯರ ಕೆಲವು ವೈಯುಕ್ತಿಕ ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ಪರಿಹಾರ ಸಿಗುವಂತಾಗಿದೆ.

    ಗ್ರೀನ್‌ಪೀಸ್‌ ಇಂಡಿಯಾ ಸಮೀಕ್ಷೆ ಅಮೃತ ನಿರ್ಮಲ ನಗರ ಯೋಜನೆಯಲ್ಲಿ ಬಂಟ್ವಾಳ ಪುರಸಭೆಗೆ ಒಂದು ಕೋಟಿ ಅನುದಾನ ಬಂದಿದೆ. ಈ ಯೋಜನೆಯಡಿಯಲ್ಲಿ 26 ಲಕ್ಷ ಅನುದಾನವನ್ನು ಪಿಂಕ್ ಟಾಯ್ಲೆಟ್‌ಗೆ ಬಳಕೆ ಮಾಡಲಾಗಿದೆ. ಪ್ರಸ್ತುತ ಕಾಮಗಾರಿ ಅಂತಿಮ ಹಂತದಲ್ಲಿದೆ. ಆಶ್ಚರ್ಯವೆಂದರೆ ಯೋಜನೆಗೆ ಎರಡೆರಡು ಬಾರಿ ತಡೆಯಾಜ್ಞೆ ಬಂದಿತ್ತು. ನಿರ್ಮಾಣ ಹಂತದ ಸಂದರ್ಭದಲ್ಲಿ ಶೌಚಾಲಯ ಕಟ್ಟಡದ ಮುಂಭಾಗ ಕುಂಬಳಕಾಯಿ, ಕುಂಕುಮ ಮೊದಲಾದ ವಸ್ತುಗಳು ಪತ್ತೆಯಾಗಿತ್ತು.

    2022ರ ಎಪ್ರಿಲ್‌ನಲ್ಲಿ ಪಿಂಕ್ ಶೌಚಾಲಯದ ನಿರ್ಮಾಣ ಕಾಮಗಾರಿ ಆರಂಭಿಸಿಲಾಗಿತ್ತು. ಈ ಶೌಚಾಲಯವು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಗೇಟ್‌ನ ಪಕ್ಕವೇ ನಿರ್ಮಾಣವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕಾಮಗಾರಿಗೆ ತಡೆ ಆದೇಶ ನೀಡಿದ್ದರು. ಬಳಿಕ ಈ ವಿಚಾರ ಪುರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ತಡೆ ತೆರವುಗೊಂಡಿತ್ತು.

   ಒಟ್ಟಿನಲ್ಲಿ ಮಹಿಳೆಯರಿಗಾಗಿ ನಿರ್ಮಾಣವಾಗುತ್ತಿರುವ ಪಿಂಕ್ ಟಾಯ್ಲೆಟ್ ಸದ್ಯ ಲೋಕಾರ್ಪಣೆಯ ಹೊಸ್ತಿಲಲ್ಲಿದೆ. ಸಾಮಾನ್ಯ ಮಹಿಳೆಯರ ಕಷ್ಟವನ್ನು ಅರಿತು ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಿರುವ ಮಹಿಳಾ ಅಧಿಕಾರಿ ಲೀನಾ ಬ್ರಿಟ್ಟೋ ಅವರ ಯೋಜನೆ ಶ್ಲಾಘನೀಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap