ಬಾಯ್‌ ಪ್ರೆಂಡ್‌ ಗೆ ಷಾಕ್‌ ನೀಡಿದ ಹುಡುಗಿ ….!

ಮುಂಬೈ :

   ಪ್ರೀತಿಯಲ್ಲಿ ಜಗಳ, ಬ್ರೇಕ್‍ ಅಪ್ ಆಗುವುದೆಲ್ಲಾ ಕಾಮನ್ ಆಗಿದೆ. ಬ್ರೇಕ್ ಅಪ್ ಆದ ನಂತರ ಕೆಲವರು ತಮ್ಮ ಪಾಡಿಗೆ ತಾವಿರುತ್ತಾರೆ. ಆದರೆ ಕೆಲವರು ಮಾತ್ರ ಅದಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ. ಅದೇರೀತಿ ಇಲ್ಲೊಬ್ಬಳು ಯುವತಿ ಬ್ರೇಕ್ ಅಪ್ ಮಾಡಿಕೊಂಡ ಪ್ರಿಯಕರನಿಗೆ ಪ್ರೇಮಿಗಳ ದಿನದಂದು ಮರೆಯಲಾಗದ ಗಿಫ್ಟ್ ನೀಡಿದ್ದಾಳೆ. ಆಕೆ ತನ್ನ ಪ್ರಿಯಕರನ ಮನೆ ಬಾಗಿಲಿಗೆ 10 ಅಲ್ಲ, 100 ಪಿಜ್ಜಾ ಬಾಕ್ಸ್‌ಗಳನ್ನು ಕಳುಹಿಸಿದ್ದಾಳೆ ಅದು ಕ್ಯಾಶ್ ಆನ್ ಡೆಲಿವರಿಯಾಗಿಯಂತೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ. ಆ ಯುವತಿ ತನ್ನ ಮಾಜಿ ಗೆಳೆಯನ ವಿರುದ್ಧ ಸೇಡು ತೀರಿಸಿಕೊಳ್ಳಲು ಪಿಜ್ಜಾ ಆರ್ಡರ್ ಮಾಡಿದ್ದಾಳೆ ಎಂಬ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಯುವತಿ ಹಣವನ್ನು ಪಾವತಿಸದೆ ನೂರು ಪಿಜ್ಜಾಗಳನ್ನು ಆತನ ಮನೆಗೆ ತಲುಪುವಂತೆ ಆರ್ಡರ್ ಮಾಡಿ ಸೇಡು ತೀರಿಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

    “ಕ್ಯಾಶ್ ಆನ್ ಡೆಲಿವರಿ ಆಯ್ಕೆಯ ಮೂಲಕ ಯುವತಿ ತನ್ನ ಮಾಜಿ ಸಂಗಾತಿಗೆ 100 ಪಿಜ್ಜಾಗಳನ್ನು ಕಳುಹಿಸಿದ್ದಾಳೆ” ಎಂದು ಈ ವಿಡಿಯೊದಲ್ಲಿ ಬರೆಯಲಾಗಿದೆ. ಫುಡ್ ಡೆಲಿವರಿ ಅಪ್ಲಿಕೇಶನ್ ಮ್ಯಾಜಿಕ್ಪಿನ್‍ಗೆ ಸಂಬಂಧಿಸಿದ ಡೆಲಿವರಿ ಬಾಯ್‍ ಪಿಜ್ಜಾಗಳನ್ನು ಗೆಳೆಯನ ಮನೆಯ ಬಾಗಿಲಿಗೆ ತೆಗೆದುಕೊಂಡು ಹೋಗುವುದು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಅದರಲ್ಲಿ ಡೆಲಿವರಿ ಬಾಯ್ ಪಿಜ್ಜಾ ಬಾಕ್ಸ್ ರಾಶಿಯನ್ನು ತೆಗೆದುಕೊಂಡು ಮೆಟ್ಟಿಲುಗಳನ್ನು ಹತ್ತುವುದು ಮತ್ತು ಅವುಗಳನ್ನು ಎಚ್ಚರಿಕೆಯಿಂದ ಆತನ ಮನೆ ಬಾಗಿಲಿನ ಬಳಿ ಇಟ್ಟಿರುವುದು ಸೆರೆಯಾಗಿತ್ತು. ಆದರೆ ಈ ಸುದ್ಧಿ ಫೇಕ್ ನ್ಯೂಸ್ ಎನ್ನಲಾಗಿದೆ.

    ಈ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಇದು ಫುಡ್‍ ಡೆಲಿವರಿ ಕಂಪನಿಯ ನಾಟಕೀಯ ಮಾರ್ಕೆಟಿಂಗ್ ಸ್ಟಂಟ್ ಎಂದು ಹೇಳಿದ್ದಾರೆ. ಇನ್ನು ಕೆಲವರು ಸ್ಮೈಲಿಂಗ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವು ನೆಟ್ಟಿಗರು ಈ ಘಟನೆಯನ್ನು ಖಂಡಿಸಿ ಇದನ್ನು “ಕಿರುಕುಳ” ಎಂದು ಕರೆದಿದ್ದಾರೆ. “ಕ್ಯಾಶ್ ಆನ್ ಡೆಲಿವರಿಗಾಗಿ ಯಾವ ಮಾರಾಟಗಾರ 100 ಪಿಜ್ಜಾ ಆರ್ಡರ್ ತೆಗೆದುಕೊಳ್ಳುತ್ತಾನೆ?” ಎಂದು ಇನ್ನೊಬ್ಬರು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ.

    “ಇದು ಬಹುಶಃ ಜಾಹೀರಾತಾಗಿದೆ; ಇಲ್ಲದಿದ್ದರೆ, ಅದನ್ನು ಯಾರು ಮತ್ತು ಯಾರಿಗಾಗಿ ಆರ್ಡರ್ ಮಾಡಿದ್ದಾರೆ ಎಂದು ಯಾರಿಗಾದರೂ ಹೇಗೆ ತಿಳಿಯುತ್ತದೆ? ಅವರು ಜಾಹೀರಾತಿಗಾಗಿ ಬ್ರಾಂಡ್ ಹೆಸರನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ “ಎಂದು ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು ಬರೆದಿದ್ದಾರೆ. 

   ಪುಣೆ ಮೂಲದ ವ್ಯಕ್ತಿಯೊಬ್ಬರು ಡೊಮಿನೋಸ್‍ನಿಂದ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಆ ಪಿಜ್ಜಾವನ್ನು ತಿನ್ನುವಾದ ಅದರಲ್ಲಿ ಸಿಕ್ಕಿದ ವಸ್ತುವನ್ನು ಕಂಡು ಅವರು ಹೌಹಾರಿದ್ದಾರೆ. ಹೌದು ಆ ವ್ಯಕ್ತಿ ಆರ್ಡರ್ ಮಾಡಿದ ಪಿಜ್ಜಾದಲ್ಲಿ ಚಾಕುವಿನ ಪೀಸ್ ಸಿಕ್ಕಿದೆ. ಇದನ್ನು ಪುರಾವೆ ಸಹಿತವಾಗಿ ಮಳಿಗೆಯ ಮ್ಯಾನೇಜರ್‌ಗೆ ತೋರಿಸಿದಾಗ ಅವರು ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

   ಪಿಂಪ್ರಿ-ಚಿಂಚ್ವಾಡ್ ನಿವಾಸಿ ಅರುಣ್ ಕಾಪ್ಸೆ ಶುಕ್ರವಾರ ಸ್ಪೈನ್ ರಸ್ತೆಯ ಜೈ ಗಣೇಶ್ ಎಂಪೈರ್‌ನಲ್ಲಿರುವ ಡೊಮಿನೋಸ್ ಮಳಿಗೆಯಿಂದ ಪಿಜ್ಜಾವನ್ನು ಆರ್ಡರ್ ಮಾಡಿದ್ದರು. ಮನೆಗೆ ಬಂದ ಪಿಜ್ಜಾವನ್ನು ತಿನ್ನುತ್ತಾ ಆನಂದಿಸುತ್ತಿರುವಾಗ, ಕಾಪ್ಸೆಗೆ ತೀಕ್ಷ್ಣವಾದ ವಸ್ತುವೊಂದು ಚುಚ್ಚಿದೆ ಎಂದು ಅನಿಸಿತು. ಆಗ ಅವರು ಅದನ್ನು ಪರಿಶೀಲಿಸಿದಾಗ ಚಾಕುವಿನ ಪೀಸ್‍ ಕಣ್ಣಿಗೆ ಬಿದ್ದಿದೆ.

Recent Articles

spot_img

Related Stories

Share via
Copy link